ಮೇಷ: ಸಂತರ ದರ್ಶನದಿಂದ ಸಮಾಧಾನ. ಅಧ್ಯಾಪಕ ವೃತ್ತಿಯಲ್ಲಿ ವರ್ಗಾವಣೆ . ನೊಂದಣಿ ಕಚೇರಿ ಸಿಬ್ಬಂದಿಗೆ ಅಧಿಕ ಆದಾಯ. ಶುಭಸಂಖ್ಯೆ:2
ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರದ ಹೆಜ್ಜೆ ಇಡಿ. ರೆಸ್ಟೋರೆಂಟ್ ಮಾಲಕರಿಗೆ ಲಾಭ. ಜೇನು ಕೃಷಿಯಲ್ಲಿ ಬದಲಾವಣೆ ಬೇಕು. ಶುಭಸಂಖ್ಯೆ:2
ಮಿಥುನ: ಕಿರುಚಿತ್ರ ನಟರಿಗೆ ಉತ್ತಮ ಅವಕಾಶ ಪ್ರಾಪ್ತಿ. ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ ಯೋಗ. ಇಷ್ಟದೇವರನ್ನು ಪೂಜಿಸಿ, ಪ್ರಾರ್ಥಿಸಿ. ಶುಭಸಂಖ್ಯೆ: 4
ಕಟಕ: ವೃತ್ತಿಪರ ಚಿತ್ರಕಾರರಿಗೆ ಅವಕಾಶ ಪ್ರಾಪ್ತಿ. ಶುಭ ಕಾರ್ಯಕ್ರಮ ಆಯೋಜಕರಿಗೆ ಉತ್ತಮ ಆದಾಯ. ವಕೀಲ ವೃತ್ತಿಯಲ್ಲಿ ಪ್ರಗತಿ.ಶುಭಸಂಖ್ಯೆ: 9
ಸಿಂಹ: ಅಪರಿಚಿತರಿಂದ ಸಹಾಯ. ಕಿರುಚಿತ್ರ ನಿರ್ದೇಶಕರಿಗೆ ಅಭಿವೃದ್ಧಿ. ಔಷಧಿ ಖರೀದಿಯಲ್ಲಿ ರಿಯಾಯಿತಿ, ಆರ್ಥಿಕ ಸಮಾಧಾನ. ಶುಭಸಂಖ್ಯೆ: 6
ಕನ್ಯಾ: ಮಹಿಳಾ ಸಹೋದ್ಯೋಗಿಗಳಿಂದ ಮಾರ್ಗದರ್ಶನ. ಟ್ರಾವೆಲ್ಸ್ ಮಾಲೀಕರಿಗೆ ಲಾಭ. ಆದಾಯ-ಖರ್ಚಿನಲ್ಲಿ ನಿಯಂತ್ರಣವಿರಲಿ. ಶುಭಸಂಖ್ಯೆ: 8
ತುಲಾ: ವಸ್ತ್ರಾಭರಣ ಲಾಭ. ಪ್ರಯಾಣದಿಂದ ಕಾರ್ಯಸಾಧನೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿರೀಕ್ಷಿತ ಯಶಸ್ಸು ಪ್ರಾಫ್ತಿಯಾಗುವುದು. ಶುಭಸಂಖ್ಯೆ:6
ವೃಶ್ಚಿಕ: ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣಹರಿದು ಬರಲಿದೆ. ಸ್ವಯಂಕೃತ ಅಪರಾಧಕ್ಕೆ ಪಶ್ಚಾತ್ತಾಪ. ಪ್ಲಾಸ್ಟಿಕ್ ಉದ್ಯಮದಲ್ಲಿ ಲಾಭ. ಶುಭಸಂಖ್ಯೆ:4
ಧನುಸ್ಸು: ಹಳೇ ಸ್ನೇಹಿತರ ಭೇಟಿ. ರಾಜಕಾರಣಿಗಳಿಗೆ ಪದವಿ ಪ್ರಾಪ್ತಿ. ನಿಮಗೆ ಸಹೋದ್ಯೋಗಿಗಳ ಬೆಂಬಲ. ಔಷಧ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ:5
ಮಕರ: ಕಟ್ಟಡ ನಿರ್ವಣದಲ್ಲಿದ್ದ ಅಡ್ಡಿ ನಿವಾರಣೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸ್ಪರ್ಧೆ.ಶಿಕ್ಷಕಿಯರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 4
ಕುಂಭ: ಹತ್ತಿ ಬಟ್ಟೆ ಗಿರಣಿಯವರಿಗೆ ಅಧಿಕ ಲಾಭ. ದವಸ ಧಾನ್ಯಗಳ ವ್ಯಾಪಾರದಲ್ಲಿ ಪ್ರಗತಿ. ಸರ್ಕಾರಿ ಅಧಿಕಾರಿಗಳಿಗೆ ಒತ್ತಡದ ಕೆಲಸ. ಶುಭಸಂಖ್ಯೆ: 7
ಮೀನ: ಸಾಕುಪ್ರಾಣಿಗಳ ಖರೀದಿ. ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಸದೃಢರಾಗಿ. ದಿನಾಂತ್ಯ ದಲ್ಲಿ ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 5