ಮೇಷ:ಯೋಜನೆಗಳು ಕಾರ್ಯಗತವಾಗಲಿವೆ. ಕೌಟುಂಬಿಕ ವಿವಾದ ರಾಜಿಯಾಗುತ್ತದೆ. ಮಹಿಳೆಯರಿಗೆ ಆದಾಯಕ್ಕಿಂತ ಖರ್ಚು ಹೆಚ್ಚು. ಶುಭಸಂಖ್ಯೆ: 5
ವೃಷಭ:ಸಹೋದ್ಯೋಗಿಗಳಿಂದ ನಿಂದನೆಗೊಳಗಾಗುವ ಸಾಧ್ಯತೆ. ಪಾರಂಪರಿಕ ವೃತ್ತಿಯಲ್ಲಿ ಆದಾಯ. ರಾಜಕಾರಣಿಗಳಿಗೆ ಅಧಿಕಾರ. ಶುಭಸಂಖ್ಯೆ: 7
ಮಿಥುನ: ಕುಟುಂಬದಲ್ಲಿ ಸಂತೋಷ ಕೂಟ. ಭೂ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಸ್ನೇಹಿತರಿಗೋಸ್ಕರ ಅಧಿಕ ಹಣ ಖರ್ಚಾಗುತ್ತದೆ. ಶುಭಸಂಖ್ಯೆ:1
ಕಟಕ:ದೂರ ಪ್ರಯಾಣ ಅನಿವಾರ್ಯ ಕಾರಣದಿಂದಾಗಿ ರದ್ದಾಗುವುದು. ಅನಿರೀಕ್ಷಿತ ಧನಾಗಮ. ವಿವಾಹ ಕಾರ್ಯಗಳು ಸಿದ್ಧಿಸುತ್ತದೆ. ಶುಭಸಂಖ್ಯೆ: 8
ಸಿಂಹ:ಶ್ರಮಕ್ಕೆ ತಕ್ಕುದಾದ ಪ್ರತಿಫಲ ಸಿಗುತ್ತದೆ. ನೆರೆಹೊರೆಯ ವರೊಂದಿಗೆ ಸ್ನೇಹದಿಂದಿರಿ. ದಂಪತಿಗಳು ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಶುಭಸಂಖ್ಯೆ:7
ಕನ್ಯಾ:ಪತಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವವು. ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 2
ತುಲಾ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ವಿಚ್ಚೇದನಕ್ಕೆ ಕಾರಣವಾಗಲಿದೆ. ಆಹಾರದಲ್ಲಿ ವ್ಯತ್ಯಾಸವಾಗಿ ಸಮಸ್ಯೆ. ಅಗ್ನಿ ಅನಾಹುತ ಸಾಧ್ಯತೆ. ಶುಭಸಂಖ್ಯೆ: 6
ವೃಶ್ಚಿಕ: ಹಳೆ ಸ್ನೇಹಿತೆಯ ಭೇಟಿ. ದೀರ್ಘಕಾಲದ ವ್ಯಾಧಿ ನಿವಾರಣೆ. ವಿವಾಹಕ್ಕೆ ಚಾಲನೆ. ಆಧ್ಯಾತ್ಮಿಕ ಚಿಂತಕರಿಂದ ಮಾರ್ಗದರ್ಶನ. ಶುಭಸಂಖ್ಯೆ: 7
ಧನುಸ್ಸು: ಆರ್ಥಿಕ ವಿಷಯದಲ್ಲಿ ಎಚ್ಚರಿಕೆ. ಐಟಿ ಉದ್ಯೋಗಿಗಳಿಗೆ ಒತ್ತಡ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು. ಕ್ರೀಡಾಪಟುಗಳಿಗೆ ಶುಭ. ಶುಭಸಂಖ್ಯೆ:4
ಮಕರ: ಅಡಕೆ ವ್ಯಾಪಾರದಲ್ಲಿ ಲಾಭ. ಅಧಿಕಾರಿಗಳಿಗೆ ಆಂತರಿಕ ಶತ್ರುಕಾಟ. ಸಂಗಾತಿಯಲ್ಲಿ ಅಸಮಾಧಾನ. ಆಸ್ತಿ ಖರೀದಿ ಯೋಚನೆ. ಶುಭಸಂಖ್ಯೆ: 8
ಕುಂಭ: ಪೋಷಕರೊಂದಿಗೆ ಉತ್ತಮ ಬಾಂಧವ್ಯ. ನಿರೀಕ್ಷಿತ ಕಾರ್ಯಗಳು ನೆರವೇರುತ್ತವೆ. ವಾಹನಗಳ ಬಿಡಿಭಾಗ ಮಾರಾಟದಲ್ಲಿ ಲಾಭ.ಶುಭಸಂಖ್ಯೆ: 5
ಮೀನ:ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು. ನಿರ್ಲಕ್ಷ್ಯ ಬೇಡ. ಬ್ಯಾಂಕ್ ಕೆಲಸದಲ್ಲಿ ಪ್ರಗತಿ. ವಿವಾದಾಸ್ಪದ ವಿಷಯದಲ್ಲಿ ಎಚ್ಚರಿಕೆ. ಶುಭಸಂಖ್ಯೆ:6