ನ್ಯೂಸ್

ನಿತ್ಯ ಭವಿಷ್ಯ: ಈ ರಾಶಿಯವರಿಗೆ ಮನೆಯಲ್ಲಿ ಶುಭಕಾರ್ಯ

ಮೇಷ:ಸಮಾಜ ಸೇವೆಯಿಂದ ತೃಪ್ತಿ. ಮನೆಯಲ್ಲಿ ಶುಭಕಾರ್ಯ. ಸ್ವಾಭಿಮಾನಕ್ಕಾಗಿ ಸ್ನೇಹಿತರಿಂದ ದೂರ. ಮಕ್ಕಳ ನಡೆಯಿಂದ ಬೇಸರ. ಶುಭಸಂಖ್ಯೆ: 9

ವೃಷಭ: ಬಂಧುಗಳೊಂದಿಗೆ ಕಲಹ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಸ್ಥಿರಾಸ್ತಿ ನಷ್ಟವಾಗುವ ಆತಂಕವಿದೆ. ಶುಭಸಂಖ್ಯೆ: 2

ಮಿಥುನ:ನಿರೀಕ್ಷಿತ ಪ್ರಯಾಣದ ವೇಳೆ ಅನಾರೋಗ್ಯ ಕಾಡೀತು. ಆಪ್ತ ಸಂಬಂಧಿಗಳೊಂದಿಗೆ ಮಾತುಕತೆ. ಗಿರಣಿ ಮಾಲೀಕರಿಗೆ ಧನ ನಷ್ಟ. ಶುಭಸಂಖ್ಯೆ:3

ಕಟಕ: ನಂಬಿದವರಿಂದಲೇ ಆರ್ಥಿಕ ಮೋಸ. ಭೂಮಿ ಖರೀದಿಯಲ್ಲಿ ದಾಖಲೆಗಳ ಸಮಸ್ಯೆ. ಸಹೋದರಿಯ ಜೀವನದಲ್ಲಿ ಏರುಪೇರು. ಶುಭಸಂಖ್ಯೆ: 7

ಸಿಂಹ:ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳ ಕಿರಿಕಿರಿ. ಸ್ತ್ರೀಯರಿಗೆ ದೈಹಿಕ, ಮಾನಸಿಕ ಸಮಸ್ಯೆ. ಮಕ್ಕಳ ನಡವಳಿಕೆಯಿಂದ ಬೇಸರ. ಶುಭಸಂಖ್ಯೆ: 6

ಕನ್ಯಾ: ರಾಜಕೀಯದವರಿಂದ ಸಹಾಯ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ವ್ಯವಹಾರದಲ್ಲಿ ನಷ್ಟ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 5

ತುಲಾ:ಮಿತ್ರರು ಶತ್ರುಗಳಾಗಿ ಪರಿವರ್ತನೆಯಾದಾರು. ಆತ್ಮಗೌರವಕ್ಕೆ ಚ್ಯುತಿಯಾಗಲಿದೆ. ಕಲಾವಿದರಿಗೆ ಉತ್ತಮ ಅವಕಾಶಗಳು ಪ್ರಾಪ್ತಿ. ಶುಭಸಂಖ್ಯೆ: 9

ವೃಶ್ಚಿಕ: ದುರಾಲೋಚನೆ ದಾರಿತಪ್ಪಿಸಬಹುದು. ಮೋಸ ಮತ್ತು ನಷ್ಟ ಅನುಭವಿಸುವಿರಿ. ಉದ್ಯೋಗ ಸ್ಥಳದಲ್ಲಿ ಒಳ್ಳೆಯ ಹೆಸರು ಗಳಿಸುವಿರಿ. ಶುಭಸಂಖ್ಯೆ: 1

ಧನುಸ್ಸು:ಆತ್ಮೀಯರಿಂದ ಸಾಲದ ಸಹಾಯ ಸಿಗಲಿದೆ. ದೇವತಾ ಕಾರ್ಯಗಳಲ್ಲಿ ಒಲವು ತೋರುವಿರಿ. ವ್ಯಾಪಾರಸ್ಥರಿಗೆ ನಿಂದನೆಯ ಭೀತಿ. ಶುಭಸಂಖ್ಯೆ: 5

ಮಕರ:ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕ ಸಮಸ್ಯೆ ನಿವಾರಣೆಯಾಗಲಿವೆ. ಪ್ರೀತಿಪಾತ್ರರು ದೂರ ವಾದಾರು, ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ:2

ಕುಂಭ:ಕುಟುಂಬ ಗೌರವಕ್ಕೆ ಧಕ್ಕೆ. ದಾಂಪತ್ಯದಲ್ಲಿ ಸಮಸ್ಯೆ. ಭವಿಷ್ಯದ ಚಿಂತನೆ, ಆತಂಕ. ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ಶುಭಸಂಖ್ಯೆ: 4

ಮೀನ:ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಬರಹಗಾರರಿಗೆ ಧನ ಸಂಪಾದನೆಗೆ ಅವಕಾಶ. ಕೃಷಿಕರಿಗೆ ಲಾಭ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:6