ನ್ಯೂಸ್

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹೊಸ ವಾಹನ ಖರೀದಿಗೆ ನಿರ್ಧಾರ

ಬಾಬುಪ್ರಸಾದ್​ ಮೋಡಿಸ್​

ಮೇಷ: ಪತ್ರಕರ್ತರಿಗೆ, ಬರಹಗಾರರಿಗೆ ಹೆಚ್ಚಿದ ಒತ್ತಡ. ದಿನಸಿ ವ್ಯಾಪಾರಗಳಿಗೆ ಲಾಭವಾಗಲಿದೆ. ಹೊಸ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:5

ವೃಷಭ: ರೆಸ್ಟೋರೆಂಟ್ ಮಾಲೀಕರಿಗೆ ನಷ್ಟವಾಗುವುದು. ಆಸ್ತಿ ವಿವಾದ ನ್ಯಾಯಾಲಯದ ಮೆಟ್ಟಿಲೇರಲಿದೆ. ಆತ್ಮೀಯರ ವಿಯೋಗ. ಶುಭಸಂಖ್ಯೆ: 9

ಮಿಥುನ: ಹೃದಯದ ಸಮಸ್ಯೆ ತಲೆದೋರೀತು. ನಂಬಿದವ ರಿಂದಲೇ ಮೋಸಕ್ಕೆ ಒಳಗಾಗುವಿರಿ. ಬ್ಯಾಂಕ್ ಉದ್ಯೋಗಿಗಳಿಗೆ ಬದಲಾವಣೆ. ಶುಭಸಂಖ್ಯೆ: 9

ಕಟಕ: ವಾಹನ ದುರಸ್ತಿಗಾಗಿ ಅಧಿಕ ಖರ್ಚು. ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಚಿಕ್ಕ ವ್ಯಾಪಾರಸ್ಥರಿಗೆ ಹೆಚ್ಚಿನ ಆದಾಯ. ಶುಭಸಂಖ್ಯೆ: 1

ಸಿಂಹ: ಮಗಳ ಮದುವೆ ಯತ್ನ ಸಫಲ. ಮಹಿಳೆಯರ ಮನೋಭಿಲಾಷೆ ಈಡೇರಲಿದೆೆ. ಮಗನ ವರ್ತನೆಯಿಂದ ಅವಕಾಶ ತಪು್ಪವುದು. ಶುಭಸಂಖ್ಯೆ:3

ಕನ್ಯಾ: ಹಳೆಯ ಸ್ನೇಹಿತನ ಭೇಟಿ. ಸ್ವಂತ ಗ್ರಾಮಕ್ಕೆ ಹೋಗಬೇಕಾಗುವುದು. ನಟನಾ ಕ್ಷೇತ್ರದವರಿಗೆ ವಿಶೇಷ ಅವಕಾಶ ಲಭ್ಯವಾಗುವುದು. ಶುಭಸಂಖ್ಯೆ:8

ತುಲಾ: ಆರಕ್ಷಕ ಅಧಿಕಾರಿಗಳಿಗೆ ಅವಮಾನ ಸಾಧ್ಯತೆ. ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿ. ಉದ್ಯಮಸ್ಥ ಮಹಿಳೆಯರಿಗೆ ನಷ್ಟ. ಶುಭಸಂಖ್ಯೆ: 3

ವೃಶ್ಚಿಕ: ರಹಸ್ಯ ವಿಷಯಗಳು ಬಯಲಾಗಬಹುದು. ಪ್ರೇಮದಲ್ಲಿ ಪಾಲಕರಿಂದ ಸಮಸ್ಯೆ. ಸಾಲ ಕೊಡುವಾಗ ಸಾಕಷ್ಟು ಎಚ್ಚರಿಕೆ ಇರಲಿ. ಶುಭಸಂಖ್ಯೆ: 7

ಧನುಸ್ಸು: ಸಹಕಾರಿ ಕ್ಷೇತ್ರದ ಉದ್ಯೋಗಿಗಳಿಗೆ ಪ್ರಗತಿ. ಹೊಸ ವಾಹನ ಖರೀದಿಗೆ ನಿರ್ಧಾರ. ನೂತನ ಗೃಹ ಆರಂಭಕ್ಕೆ ಚಾಲನೆ ನೀಡುವಿರಿ. ಶುಭಸಂಖ್ಯೆ: 6

ಮಕರ: ಕೂಡಿಟ್ಟ ಹಣ ಕಳ್ಳತನವಾಗಲಿದೆ. ಸಂಗಾತಿಗೆ ಅನಾರೋಗ್ಯ. ವೈದ್ಯಕೀಯ ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಶುಭಸಂಖ್ಯೆ:1

ಕುಂಭ: ಆಸ್ತಿ ವಿವಾದಕ್ಕೆ ರ್ತಾಕವಾಗಿ ಅಂತ್ಯ. ಕಾರ್ವಿುಕರ ಕೊರತೆಯಿಂದ ಹೋಟೆಲ್ ಉದ್ಯಮದಲ್ಲಿ ನಷ್ಟ. ಬಾಡಿಗೆದಾರರ ಜತೆ ಕಲಹ. ಶುಭಸಂಖ್ಯೆ:9

ಮೀನ: ವಿವಾಹ ಸಂಬಂಧಿ ನಿರ್ಧಾರದಲ್ಲಿ ಗೊಂದಲ. ವಿದೇಶ ಪ್ರಯಾಣಕ್ಕೆ ಅನುಮತಿ ಸಿಗಲಿದೆ. ಭದ್ರತಾ ಉದ್ಯೋಗಿಗಳಿಗೆ ಲಾಭವಿದೆ. ಶುಭಸಂಖ್ಯೆ:6