ಮೇಷ: ಹೊಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸುವಿರಿ. ಕುಟುಂಬದಲ್ಲಿ ಸಂತೋಷ.ಶುಭಸಂಖ್ಯೆ: 7
ವೃಷಭ: ಹಣಕಾಸಿನ ವಿಷಯಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಸ್ನೇಹಿತರ ಸಹಕಾರ ದೊರೆಯುವುದು. ಪ್ರಯಾಣದ ಸಾಧ್ಯತೆ ಇದೆ. ಶುಭಸಂಖ್ಯೆ:9
ಮಿಥುನ: ಹೊಸ ಪರಿಚಯಗಳು ಲಾಭಕಾರಿಯಾಗುವವು. ಉದ್ಯೋಗದಲ್ಲಿ ವಿಶೇಷ ಮೆಚ್ಚುಗೆ ಸಿಗಲಿದೆ. ಆರೋಗ್ಯದ ಕಡೆ ಗಮನ ಕೊಡಿ. ಶುಭಸಂಖ್ಯೆ:2
ಕಟಕ: ಮನೆಮಂದಿಯೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಹೊಸ ಯೋಜನೆಗಳು ಫಲಪ್ರದ. ಆತ್ಮೀಯರಿಂದ ಸಂತೋಷದ ಸುದ್ದಿ. ಶುಭಸಂಖ್ಯೆ:3
ಸಿಂಹ: ವ್ಯವಹಾರದಲ್ಲಿ ಪ್ರಗತಿಯಾಗುವುದು. ಹಿರಿಯರಿಂದ ಸಹಕಾರ. ಅಲ್ಪ ಆರೋಗ್ಯ ತೊಂದರೆ. ಸಹನೆಯಿಂದ ನಡೆದುಕೊಳ್ಳಿ. ಶುಭಸಂಖ್ಯೆ: 9
ಕನ್ಯಾ: ಹೊಸ ಯೋಜನೆಗಳಿಗೆ ಉತ್ತಮ ಕಾಲ ಬರಲಿದೆ. ಹಣಕಾಸಿನ ಸ್ಥಿತಿ ಸುಧಾರಿಸುವುದು. ಧಾರ್ವಿುಕ ಚಟುವಟಿಕೆಯಲ್ಲಿ ಹೆಚ್ಚುಆಸಕ್ತಿ. ಶುಭಸಂಖ್ಯೆ:2
ತುಲಾ: ಹಳೆಯ ವಿಷಯಗಳು ಬಗೆಹರಿಯುವುವು. ಆತ್ಮೀಯರ ಬೆಂಬಲ ದೊರೆಯಲಿದೆ. ಮನಸ್ಸಿಗೆ ಶಾಂತಿ. ಇಷ್ಟದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ:8
ವೃಶ್ಚಿಕ: ಕಾರ್ಯ ಕ್ಷೇತ್ರದಲ್ಲಿ ಒತ್ತಡದ ದಿನ. ಯಾವುದೇ ಸಂದರ್ಭದಲ್ಲೂ ಸಹನೆಯಿಂದ ನಡೆದುಕೊಳ್ಳಿ. ದಿನಾಂತ್ಯ ಸುಖಕರವಾಗಿರುತ್ತದೆ. ಶುಭಸಂಖ್ಯೆ:4
ಧನಸ್ಸು: ಹೊಸ ಅವಕಾಶಗಳು ಎದುರಾಗುವುವು. ಉತ್ಸಾಹದಿಂದ ಕಾರ್ಯಗತಗೊಳಿಸಿ. ಪ್ರಯತ್ನ ಫಲಕಾರಿ ಯಾಗುತ್ತದೆ. ಸಂತಸದ ದಿನ.ಶುಭಸಂಖ್ಯೆ:1
ಮಕರ: ವಿವಿಧ ಮೂಲಗಳಿಂದ ಹಣಕಾಸಿನ ಲಾಭ ಹರಿದು ಬರಲಿದೆ. ಕುಟುಂಬದಲ್ಲಿ ಹರ್ಷದ ವಾತಾವರಣ. ಉದ್ಯೋಗದಲ್ಲಿ ಮೆಚ್ಚುಗೆ. ಶುಭಸಂಖ್ಯೆ:7
ಕುಂಭ: ನಿರ್ಧಾರಗಳಲ್ಲಿ ಅಲ್ಪ ಗೊಂದಲ. ಹಿರಿಯರ ಸಲಹೆ ಅನುಸರಿಸಿದರೆ ಎಲ್ಲ ಸರಾಗ. ಮಧ್ಯಾಹ್ನದ ನಂತರ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ:6
ಮೀನ: ಪ್ರೀತಿಯಲ್ಲಿ ಅನಿರೀಕ್ಷಿತ ಪ್ರಗತಿಯಾಗಲಿದೆ. ಹೊಸ ಸಂಪರ್ಕಗಳಿಂದ ಲಾಭವಾಗಲಿದೆ. ಮನಸ್ಸಿಗೆ ಶಾಂತಿ ಮತ್ತು ಸಂತೋಷ. ಶುಭಸಂಖ್ಯೆ: 9