ನ್ಯೂಸ್

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ

ಮೇಷ: ಹೊಸ ಅವಕಾಶಗಳು ಎದುರಾಗಬಹುದು. ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 5

ವೃಷಭ: ಮನೆಯವರಿಂದ ಸಹಕಾರ ಸಿಗುತ್ತದೆ. ಹೊಸ ಹೂಡಿಕೆ ಯೋಚನೆ ಯಶಸ್ವಿಯಾಗಬಹುದು. ಆರೋಗ್ಯದ ಕಡೆ ಗಮನ ಕೊಡಿ. ಶುಭಸಂಖ್ಯೆ:9

ಮಿಥುನ: ಸ್ನೇಹಿತರಿಂದ ಸಹಾಯ ದೊರೆಯಲಿದೆ. ಹೊಸ ಕೆಲಸದಲ್ಲಿ ಪ್ರಗತಿಯಾಗುವುದು. ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ಶುಭಸಂಖ್ಯೆ:2

ಕಟಕ: ಕುಟುಂಬದಲ್ಲಿ ಸಣ್ಣ ವಿವಾದ ಉಂಟಾಗಬಹುದು. ಸಾರಿಗೆ ಅಧಿಕಾರಿ ವರ್ಗದವರಿಗೆ ಸಹನೆ ಇರಲಿ. ಆರೋಗ್ಯದ ಸ್ಥಿತಿ ಉತ್ತಮ. ಶುಭಸಂಖ್ಯೆ:4

ಸಿಂಹ: ಕಲಾವಿದರಿಗೆ ಗೌರವ ಹೆಚ್ಚಾಗುವ ದಿನ. ನಿಮ್ಮ ಪ್ರತಿಭೆಗೆ ಅಧಿಕಾರಿಗಳು ಸಂತೋಷ ಪಡುತ್ತಾರೆ. ಹಣದ ಪ್ರವಾಹ ಉತ್ತಮ. ಶುಭಸಂಖ್ಯೆ:7

ಕನ್ಯಾ: ಹೊಸ ಕೆಲಸದಲ್ಲಿ ಅಲ್ಪ ಅಡಚಣೆ. ಹಣ್ಣು, ತರಕಾರಿ ವ್ಯಾಪಾರದಲ್ಲಿ ಶ್ರಮದಿಂದ ಫಲ. ನಿಮ್ಮ ನಿರ್ಧಾರಕ್ಕೆ ಬಂಧುಗಳ ಬೆಂಬಲ. ಶುಭಸಂಖ್ಯೆ:1

ತುಲಾ: ದೈಹಿಕ ಶ್ರಮ ಹೆಚ್ಚಾಗಬಹುದು. ಹಣದ ವಿಚಾರದಲ್ಲಿ ಎಚ್ಚರ. ಸಂಗೀತಗಾರರಿಗೆ ಯಶಸ್ಸು. ಪುರಸ್ಕಾರ ದೊರೆಯುವ ಸಾಧ್ಯತೆ. ಶುಭಸಂಖ್ಯೆ:9

ವೃಶ್ಚಿಕ: ಮನಸ್ಸು ಖುಷಿಯಾಗಿರುತ್ತದೆ. ಪ್ರೀತಿಯ ವಿಷಯದಲ್ಲಿ ಯಶಸ್ಸು ಸಿಗಲಿದೆ. ಹೊಸ ಯೋಜನೆ ಆರಂಭಿಸಲು ಉತ್ತಮ ಕಾಲ. ಶುಭಸಂಖ್ಯೆ: 4

ಧನುಸ್ಸು: ಹೊಸ ಸಂಪರ್ಕಗಳು ಲಾಭಕರವಾಗಲಿವೆ. ವ್ಯವಹಾರಗಳಲ್ಲಿ ಉತ್ತಮ ಸಂಪಾದನೆ. ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ಅಗತ್ಯ. ಶುಭಸಂಖ್ಯೆ:7

ಮಕರ: ಕುಟುಂಬದವರಿಂದ ಪೋ›ತ್ಸಾಹ. ಆದಾಯ ತೆರಿಗೆ ಇಲಾಖೆಯ ಉದ್ಯೋಗಿಗಳಿಗೆ ಒತ್ತಡ. ಮನೆಯಲ್ಲಿ ಶಾಂತವಾಗಿ ವರ್ತಿಸಿ. ಶುಭಸಂಖ್ಯೆ:2

ಕುಂಭ: ನಿಮ್ಮ ನಿರ್ಧಾರಗಳು ಯಶಸ್ವಿಯಾಗಿ ಸಮಾಧಾನ. ಹಣಕಾಸಿನ ಸ್ಥಿತಿ ಸುಧಾರಣೆ. ಸ್ನೇಹಿತರಿಂದ ನಿಮ್ಮ ನಿರ್ಧಾರಕ್ಕೆ ಬೆಂಬಲ. ಶುಭಸಂಖ್ಯೆ:1

ಮೀನ: ನಿಮ್ಮ ಯೋಜನೆಗಳು ಮತ್ತು ಪ್ರಯತ್ನ ಫಲ ನೀಡುತ್ತದೆ. ಧಾರ್ವಿುಕ ಚಟುವಟಿಕೆಗಳಲ್ಲಿ ಆಸಕ್ತಿ. ಮನಸ್ಸು ಶಾಂತವಾಗಿರುತ್ತದೆ. ಶುಭಸಂಖ್ಯೆ: 6