ಮೇಷ: ಆಸ್ತಿ ನೋಂದಣಿ ಕೆಲಸಗಾರರಿಗೆ ಶುಭ. ಪೀಠೋಪಕರಣಗಳ ಖರೀದಿಯಲ್ಲಿ ಲಾಭ. ನಾಟಕದತ್ತ ಆಸಕ್ತಿ ತಾಳುವಿರಿ. ಶುಭಸಂಖ್ಯೆ: 5
ವೃಷಭ: ಹಣ್ಣುಗಳ ವ್ಯಾಪಾರಸ್ಥರಿಗೆ ಲಾಭ. ದಿನಸಿ ವ್ಯಾಪಾರಸ್ಥರಿಗೆ ಹಿನ್ನಡೆಯಾಗುವುದು. ಆರೋಗ್ಯದಲ್ಲಿ ಎಚ್ಚರ ವಹಿಸುವುದು ಅಗತ್ಯ.ಶುಭಸಂಖ್ಯೆ:1
ಮಿಥುನ: ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗಲಿದೆ. ಜಂಟಿ ವ್ಯವಹಾರದಲ್ಲಿ ಕಿರಿಕಿರಿ ಅನುಭವಿಸಬೇಕಾದೀತು. ಸ್ನೇಹಿತರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ:9
ಕಟಕ: ದೂರ ಪ್ರಯಾಣ. ಅಡಕೆ ಬೇಸಾಯದಲ್ಲಿ ಅಧಿಕ ನಷ್ಟ. ವಿದೇಶಿ ವ್ಯವಹಾರದಲ್ಲಿ ಲಾಭ. ಸ್ವಂತ ಊರಿಗೆ ಪಯಣಿಸುವಿರಿ. ಶುಭಸಂಖ್ಯೆ: 5
ಸಿಂಹ: ಆಪ್ತರಿಂದಾಗಿ ನಷ್ಟ ಅನುಭವಿಸುವಿರಿ. ತೈಲ ವ್ಯಾಪಾರಿಗಳಿಗೆ ಆದಾಯ, ಉದ್ಯೋಗದಲ್ಲಿ ಲಾಭ. ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ:2
ಕನ್ಯಾ: ಒಳಾಂಗಣ ವಿನ್ಯಾಸಗಾರರಿಗೆ ಉತ್ತಮ ಗಳಿಕೆ. ತಂದೆಯಿಂದ ಆರ್ಥಿಕ ಸಹಾಯ ಸಿಗಲಿದೆ. ಮಿತ್ರರೊಂದಿಗೆ ಮನಸ್ತಾಪ. ಶುಭಸಂಖ್ಯೆ:8
ತುಲಾ: ವಿದ್ಯಾರ್ಥಿಗಳಿಗೆ ಅನುಕೂಲಕರ ದಿವಸ. ಉದ್ಯೋಗದಲ್ಲಿ ಪ್ರಗತಿಯಾಗುವುದು. ಕೋರ್ಟ್ ಕೇಸುಗಳಲ್ಲಿ ಜಯ ನಿಮ್ಮ ಕಡೆಗಿದೆ. ಶುಭಸಂಖ್ಯೆ:1
ವೃಶ್ಚಿಕ: ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ ಹೆಚ್ಚಲಿದೆ. ಮಹಿಳಾ ರಾಜಕಾರಣಿಗಳಿಗೆ ಶುಭದಿನ. ಮಕ್ಕಳಿ ಗೋಸ್ಕರ ಖರ್ಚು ಹೆಚ್ಚಾಗುವುದು.ಶುಭಸಂಖ್ಯೆ:4
ಧನಸ್ಸು: ಹೂಡಿಕೆ ಸದ್ಯಕ್ಕೆ ಬೇಡ. ವಿಶ್ರಾಂತಿ ವೇತನ ಲಭಿಸುವುದು. ಉದ್ಯೋಗ ನಿಮಿತ್ತ ಪ್ರಯಾಣ ಸಾಧ್ಯತೆ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 8
ಮಕರ: ಸಂಗಾತಿಯಿಂದ ಅನುಕೂಲ ಒದಗಿಬರುವುದು. ಪಾಲುದಾರಿಕೆಯಲ್ಲಿ ಉತ್ತಮ ಲಾಭ. ರೋಗ ಬಾಧೆಗಳಿಂದ ಮುಕ್ತಿ. ಶುಭಸಂಖ್ಯೆ:6
ಕುಂಭ: ವಾಣಿಜ್ಯ ವಿದ್ಯಾರ್ಥಿಗಳಿಗೆ ಜಯ ಸಿಗುವುದು. ಸ್ಥಿರಾಸ್ತಿಯಿಂದ ನಷ್ಟ. ಮಾನಸಿಕವಾದ ದೌರ್ಬಲ್ಯ. ಸ್ತ್ರೀಯರಿಗೆ ವಸ್ತ್ರ ಲಾಭ. ಶುಭಸಂಖ್ಯೆ: 2
ಮೀನ: ಆಪ್ತರೊಂದಿಗೆ ಸಂಕಷ್ಟ ಹಂಚಿಕೊಳ್ಳುವಿರಿ. ಪತ್ನಿಯ ಆರೋಗ್ಯ ಹುಷಾರು. ಪ್ರಿಯಜನರ ಭೇಟಿ. ಸ್ನೇಹಿತರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 9