ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ನೂತನ ಮನೆ ಖರೀದಿ ಯೋಗ

ಮೇಷ: ಸರ್ಕಾರದಿಂದ ನಿಮ್ಮ ಯೋಜನೆಗೆ ಅಸಹಕಾರ. ಆಹಾರ ಸರಬರಾಜು ವೃತ್ತಿಯಲ್ಲಿ ಆದಾಯ. ಕೀರ್ತಿ ಪ್ರತಿಷ್ಠೆ ಹೆಚ್ಚುವುದು. ಶುಭಸಂಖ್ಯೆ: 9

ವೃಷಭ: ಕಾನೂನು ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಧಾರ್ವಿುಕ ಕಾರ್ಯದಿಂದ ಮಾನಸಿಕ ನೆಮ್ಮದಿ. ಆಧ್ಯಾತ್ಮಿಕದತ್ತ ಮನಸ್ಸು. ಶುಭಸಂಖ್ಯೆ: 1

ಮಿಥುನ: ಸಹೋದರರಿಂದ ಸಾಲ ತೀರಿಸಲು ಸಹಾಯ. ಭೂಮಿ ವಿಷಯದಲ್ಲಿ ಅನುಕೂಲ. ಅಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಶುಭಸಂಖ್ಯೆ:5

ಕಟಕ: ಮಗನ ವಿವಾಹ ವಿಷಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಿ. ಮಹಿಳಾ ಉದ್ಯಮಿಗಳಿಗೆ ಆದಾಯ. ಕುಟುಂಬದಲ್ಲಿ ಸಾಮರಸ್ಯ. ಶುಭಸಂಖ್ಯೆ: 2

ಸಿಂಹ: ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ರಂಗ ಕಲಾವಿದರಿಗೆ ನಿರೀಕ್ಷಿತ ಪ್ರದರ್ಶನ ಲಭ್ಯ. ನೂತನ ಮನೆ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 2

ಕನ್ಯಾ: ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವಿರಿ. ವಾಣಿಜ್ಯ ಶಾಸ್ತ್ರ ಅಧ್ಯಯನದಲ್ಲಿ ಶುಭ. ಶುಭಸಂಖ್ಯೆ: 8

ತುಲಾ: ಮಕ್ಕಳಿಂದ ಸಂತೋಷದ ಸುದ್ದಿ ಕೇಳಿಬರಲಿದೆ. ಕುಲದೇವತಾ ಆರಾಧನೆ ಮಾಡುವಿರಿ. ವಿವಾಹ ಪ್ರಯತ್ನಗಳಲ್ಲಿ ಅನುಕೂಲ. ಶುಭಸಂಖ್ಯೆ: 7

ವೃಶ್ಚಿಕ: ಸ್ನೇಹಿತರೊಂದಿಗೆ ಸಾಮರಸ್ಯ ಸಾಧಿಸಿ. ಖಾಸಗಿ ವೃತ್ತಿಯಲ್ಲಿ ಒತ್ತಡ. ಸ್ಟೇಷನರಿ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಶುಭಸಂಖ್ಯೆ: 9

ಧನಸ್ಸು: ತಂದೆಯ ಆರೋಗ್ಯದಲ್ಲಿ ಚೇತರಿಕೆ. ವಿದ್ಯಾರ್ಥಿನಿಯರಿಗೆ ಮಾನಸಿಕ ಭಯ. ವಿವಾಹ ಪ್ರಯತ್ನದಲ್ಲಿ ಮುನ್ನಡೆಯಾಗಲಿದೆೆ. ಶುಭಸಂಖ್ಯೆ: 9

ಮಕರ: ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು. ಮನರಂಜನೆಗೆ ವಿಪರೀತ ಖರ್ಚು. ದುಡುಕುತನದ ಮಾತು ನಿಯಂತ್ರಿಸಿ. ಶುಭಸಂಖ್ಯೆ: 2

ಕುಂಭ: ತರಕಾರಿ ಬೇಸಾಯದಲ್ಲಿ ಉತ್ತಮ ಆದಾಯ ಸ್ತ್ರೀಯರಿಗೆ ಸಮಾಜದಲ್ಲಿ ಗೌರವ. ಹೂ ಮತ್ತು ಹಣ್ಣು ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 1

ಮೀನ: ಕಣ್ಣಿನ ಸಮಸ್ಯೆ ಕಾಡಲಿದೆ. ಆದಾಯ ಅಧಿಕಾರಿಗಳಿಂದ ತೊಂದರೆ ಬರಬಹುದು. ವಾಹನ ಮಾಲೀಕರಿಗೆ ಅನಿರೀಕ್ಷಿತ ನಷ್ಟ. ಶುಭಸಂಖ್ಯೆ:4