ಮೇಷ: ಜಟಿಲ ಸಮಸ್ಯೆಗೆ ಪರಿಹಾರ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ. ಕೃಷಿ ಕ್ಷೇತ್ರದಲ್ಲಿ ಸಮಾಧಾನಕರ ಬೆಳವಣಿಗೆ. ಶುಭಸಂಖ್ಯೆ: 6
ವೃಷಭ: ಸಾಮಾಜಿಕವಾಗಿ ಜನಪ್ರಿಯತೆ. ಅಪಾಯಕಾರಿ ಕೆಲಸದವರು ಹುಷಾರು. ಆಯುರ್ವೆದ ಔಷಧ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9
ಮಿಥುನ: ಕೆಲಸದ ನಿಮಿತ್ತ ವಿದೇಶ ಪ್ರಯಾಣ. ಆಹಾರದ ವಿಚಾರದಲ್ಲಿ ಹತೋಟಿ ಇರಲಿ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಗಳಿಕೆ. ಶುಭಸಂಖ್ಯೆ: 2
ಕಟಕ: ಯೋಗಾಸನ ಶಿಕ್ಷಕರಿಗೆ ಶುಭದಿನ. ಹೃದಯ ಸಂಬಂಧಿ ಅನಾರೋಗ್ಯಕ್ಕೆ ಚಿಕಿತ್ಸೆ. ಹಾಲು ಉತ್ಪನ್ನಗಳ ವ್ಯಾಪಾರದಲ್ಲಿ ಸವಾಲು. ಶುಭಸಂಖ್ಯೆ: 6
ಸಿಂಹ: ಕೊಟ್ಟ ಹಣ ಬಡ್ಡಿ ಸಮೇತ ತಿರುಗಿ ಬರಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಸ್ಥಳ ಬದಲಾವಣೆ. ಷೇರು ವ್ಯವಹಾರದಲ್ಲಿ ಲಾಭ.ಶುಭಸಂಖ್ಯೆ: 3
ಕನ್ಯಾ: ಸಹೋದ್ಯೋಗಿಗಳ ಸಹಕಾರದಿಂದ ಕೆಲಸಗಳು ಅಚ್ಚುಕಟ್ಟಾಗಿ ಮುಗಿಯಲಿದೆ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಶುಭಸಂಖ್ಯೆ: 3
ತುಲಾ: ಸಿದ್ಧ ಉಡುಪುಗಳ ಕಾರ್ಖಾನೆಯವರಿಗೆ ಲಾಭ. ಮಕ್ಕಳ ಸಾಧನೆಯಿಂದ ಹೆಮ್ಮೆ. ಫ್ಯಾನ್ಸಿ ಸ್ಟೋರ್ಸ್ ಮಾಲೀಕರಿಗೆ ಲಾಭ. ಶುಭಸಂಖ್ಯೆ: 7
ವೃಶ್ಚಿಕ: ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ವೃದ್ದಿ. ಲೇವಾದೇವಿ ವ್ಯವಹಾರದಲ್ಲಿ ಪ್ರಗತಿ. ಸಾಲ ವಸೂಲಿಯಲ್ಲಿ ಯಶ. ಶುಭಸಂಖ್ಯೆ: 4
ಧನಸ್ಸು: ತಾಂತ್ರಿಕ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ಶುಭಸುದ್ದಿ ಕೇಳುವಿರಿ. ಬಂಧುಗಳಿಂದ ಅನಿರೀಕ್ಷಿತ ಉಡುಗೊರೆ ದೊರಕಲಿದೆ. ಶುಭಸಂಖ್ಯೆ: 7
ಮಕರ: ಸೋದರ ಸಂಬಂಧಿಗಳೊಂದಿಗೆ ದೂರ ಪ್ರಯಾಣ. ನಿಮ್ಮ ಕಾರ್ಯ ವೈಖರಿಗೆ ಅಧಿಕಾರಿಗಳಿಂದ ಪ್ರಶಂಸೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 4
ಕುಂಭ: ನೂತನ ಗೃಹ ನಿರ್ವಣಕ್ಕೆ ಚಾಲನೆ ದೊರೆಯಲಿದೆ. ಮಕ್ಕಳ ಬಗ್ಗೆ ನಿರ್ಲಕ್ಷ್ಯ ಸಲ್ಲ. ಹಣ ಹೂಡಿಕೆಗೆ ಇಂದು ಸುಸಮಯ. ಶುಭಸಂಖ್ಯೆ: 8
ಮೀನ: ಆರ್ಥಿಕವಾಗಿ ಸದೃಢರಾಗುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಕೃಷಿ ಉಪಕರಣಗಳ ಖರೀದಿಯಲ್ಲಿ ಲಾಭವಿದೆ. ಶುಭಸಂಖ್ಯೆ: 3