mohan delkar 
ನ್ಯೂಸ್

ಸಂಸದ ಮೋಹನ್ ದೇಲ್ಕರ್ ಸಾವಿನಲ್ಲಿ ಬಿಜೆಪಿ ಕೈವಾಡವಿದೆ ಎಂದ ಮಹಾರಾಷ್ಟ್ರ ಕಾಂಗ್ರೆಸ್

ಮುಂಬೈ: ನಿನ್ನೆ ಮುಂಬೈನ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ದಾದರ ಮತ್ತು ನಗರ ಹವೇಲಿ ಸಂಸದ ಮೋಹನ್ ದೇಲ್ಕರ್ ಅವರ ಸಾವಿನ ಬಗ್ಗೆ ಮಹಾರಾಷ್ಟ್ರ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ. ಅವರ ಸಾವಿನಲ್ಲಿ ಬಿಜೆಪಿ ಕೈವಾಡ ಇದೆ ಎಂದು ಆರೋಪಿಸಿದೆ. ಈ ಬಗ್ಗೆ ಉನ್ನತ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರವನ್ನು ಕೇಳಿಕೊಂಡಿದೆ.

ಇಂದು ಮರಣೋತ್ತರ ಪರೀಕ್ಷೆ ನಡೆಸಿದ ದಾದರ್ ಪೊಲೀಸರು ಅವರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದೆ. ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರಾಡಳಿತ ಪ್ರದೇಶವಾದ ದಾದರ್ ಮತ್ತು ನಗರ ಹವೇಲಿ ಸಂಸದ ಮೋಹನ್ ದೇಲ್ಕರ್ (58) ಅವರ ಮೃತದೇಹ ಮುಂಬೈನ ಮರಿನ್ ಡ್ರೈವ್​ ಹೋಟೆಲ್ ಒಂದರ ಕೋಣೆಯಲ್ಲಿ ಸೋಮವಾರ ಪತ್ತೆಯಾಗಿತ್ತು.

ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರು. ಸ್ಥಳದಲ್ಲಿ ಡೆತ್​ನೋಟ್ ಪತ್ತೆಯಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದ್ದವು. ಅಲ್ಲದೇ ಅವರ ಸಾವಿನ ಸುತ್ತಮುತ್ತ ಅನುಮಾನಗಳೂ ಮೂಡಿವೆ. ದಾದರ್ ನಗರ ಹವೇಲಿಯಿಂದ ಏಳು ಬಾರಿ ಸಂಸದರಾಗಿದ್ದದ ಮೋಹನ್ ಮೊದಲು ಕಾಂಗ್ರೆಸ್​ನಲ್ಲಿದ್ದರು. 2019 ರಲ್ಲಿ ಕಾಂಗ್ರೆಸ್ ತೊರೆದು ಜೆಡಿಯು ಬೆಂಬಲದಿಂದ ಪಕ್ಷೇತರರಾಗಿ ಗೆದ್ದಿದ್ದರು.