ತಾರಾಗಣ: ಡಾಲಿ ಧನಂಜಯ, ಪೂರ್ಣಚಂದ್ರ, ನಾಗಭೂಷಣ, ವಿನಯ ಪ್ರಸಾದ್, ಗುರುದತ್, ಗೀತಾ, ಮಹದೇವ್ ಪ್ರಸಾದ್, ಶ್ರೀವತ್ಸ, ಯಶವಂತ್ ಮತ್ತಿತರರು
ರಾಸಿ, ದೊನ್ನೆ ಬಿರಿಯಾನಿ, ಎಸ್ಎಮ್ಎಸ್, ಬ್ಯಾಂಡ್ ಏಡ್, ಶೇರ್ವಾ, ಅನಾರ್ಕಲಿ, ಜೀರಿಗೆ, ಜಿಲೇಬಿ, ಗುಲ್ಕನ್, ಬಾಯಲ್ಡ್ ಎಗ್, ಕೈಮ, ಗೀರೈಸ್, ಸಿಸಿಟಿವಿ, ಪಂಚರ್, ಮಡ್ಗಾರ್ಡ್, ಚಿಲ್ಯ ಮಿಲ್ಯ, ಗೋಬಿ, ಮೋಮೋ, ಸಾಸಿವೆ, ಒಗ್ಗರಣೆ, ಸಾಂಬಾರ್... ಅರೆ ಇದೇನಿದು ಗ್ಯಾರೇಜ್, ಹೋಟೆಲ್ನಲ್ಲಿ ಸಿಗುವ ಐಟಂಗಳಲ್ಲವೇ ಅಂತ ನಿಮಗನ್ನಿಸಬಹುದು. ಆದರೆ, ಅವೆಲ್ಲವೂ ಪಾತ್ರಗಳ ಹೆಸರು! ಈ ಎಲ್ಲ ವಿಲಕ್ಷಣ, ವಿಭಿನ್ನ, ವಿಶೇಷ ಕ್ಯಾರಕ್ಟರ್ಗಳು ಸೇರಿ ನಿಮ್ಮನ್ನು ನಗಿಸುತ್ತಾ ಬನಶಂಕರಿ, ಹೊಸಕೆರೆಹಳ್ಳಿ ಬೀಚ್, ನಾಗರಬಾವಿ ಪೋರ್ಟ್ ದರ್ಶನ ಮಾಡಿಸುವುದೇ "ಮದರ್ ಪ್ರಾಮಿಸ್'!
ರಾಸಿ ಅಲಿಯಾಸ್ ರಾಮಚಂದ್ರ (ಧನಂಜಯ) ಬೆಂಗಳೂರಿನ ಜೂಜಾಟದ ಕಿಂಗ್. ದಿನೇಶ್ ಉ್ರ್ ದೊನ್ನೆ ಬಿರಿಯಾನಿ (ಮಹದೇವ್) ಡ್ರಗ್ಸ್ ಕಿಂಗ್ಪಿನ್. ಇಬ್ಬರೂ ಒಂದು ಕಾಲದ ಗೆಳೆಯರೇ. ಆದರೆ, "ಸಾರಿ' ಎಂಬ ಒಂದು ಪದದಿಂದಾಗಿ ದೂರಾಗಿ, ಬೆಂಗಳೂರು ಮಧ್ಯದಲ್ಲಿ ಒಂದು ಗೆರೆ ಎಳೆದು ಭಾಗ ಮಾಡಿಕೊಂಡುಬಿಟ್ಟಿರುತ್ತಾರೆ. ಅತ್ತ ರಾಸಿಗೆ ಅಮ್ಮ ಕೊಡಿಸಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಕಳ್ಳತನವಾಗಿರುತ್ತದೆ. ಇತ್ತ ಬಿರಿಯಾನಿಗೆ ಸೇರಿದ ಡ್ರಗ್ಸ್ ತುಂಬಿದ ಬ್ಯಾಗ್ ಕೂಡ ಕಣ್ಮರೆಯಾಗಿರುತ್ತದೆ. ಮತ್ತೊಂದೆಡೆ ಕ್ರಿಕೆಟ್, ಕಬಡ್ಡಿ ಮಾತ್ರವಲ್ಲ ಏರಿಯಾದ ರಂಗೋಲಿ ಕಾಂಪಿಟಿಷನ್ನಿಂದ ಹಿಡಿದು ಬಾರ್ನಲ್ಲಿ ಯಾರು ಯಾವ ಬ್ರ್ಯಾಂಡ್ ಖರೀದಿಸುತ್ತಾರೆ? ಏನು ಸೈಡ್ಸ್ ಆರ್ಡರ್ ಮಾಡುತ್ತಾರೆ? ಎನ್ನುವವರೆಗೂ ಬೆಟ್ಟಿಂಗ್ ಆಡುವ, ರ್ಯಾಂಡಿ (ಪೂರ್ಣ) ಗ್ಯಾಂಬ್ಲಿಂಗ್ ಮಾಡಲು ಬಂದು ₹20 ಲಕ್ಷ ಕಳೆದುಕೊಂಡಿರುತ್ತಾನೆ. ಹೀಗೆ ಈ ಮೂವರೂ ತಮ್ಮ ಪಟಾಲಂ ಜತೆ ಸೇರಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗುವ ಕಥೆ ನಕ್ಕು ನಗಿಸುವ "ಮದರ್ ಪ್ರಾಮಿಸ್'.
ಬಹುಶಃ ಇದು ನಟ ಡಾಲಿ ಧನಂಜಯ ಅವರ ಮೊದಲ ಔಟ್ ಆ್ಯಂಡ್ ಔಟ್ ಕಾಮಿಡಿ ಸಿನಿಮಾ. ಜತೆಗೆ ್ಯಾಮಿಲಿ ಡ್ರಾಮಾ, ಥ್ರಿಲ್ಲರ್ ಮತ್ತು ಸೆಂಟಿಮೆಂಟ್ ಅಂಶಗಳಿವೆ. ಬಹುತೇಕ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯ ನೀಡಲಾಗಿದೆ. ಹೀಗಾಗಿ ಒಂದಲ್ಲಾ ಒಂದು ಪಾತ್ರ, ಒಂದಲ್ಲಾ ಒಂದು ರೀತಿ ಚಿತ್ರದಾದ್ಯಂತ ನಗಿಸುತ್ತಾ ಸಾಗುತ್ತದೆ. ಜತೆಗೆ ಈ ನ್ ರೈಡ್ನಲ್ಲಿ ರೊಮ್ಯಾನ್ಸ್ ಇಲ್ಲದಿರುವ ಕಾರಣ ನಾಯಕಿಯರಿಲ್ಲ. ಇರುವುದು ವಿನಯ ಪ್ರಸಾದ್ ಮತ್ತು ಗೀತಾ ನಟಿಸಿರುವ ಅಮ್ಮಂದಿರ ಪಾತ್ರವಷ್ಟೆ.
166 ನಿಮಿಷವಿರುವ ಕಾರಣ ಮೊದರ್ಲಧ ಸ್ವಲ್ಪ ನಿಧಾನ ಎನಿಸಿದರೂ, ದ್ವೀತಿಯಾರ್ಧದಲ್ಲಿ ಹುಡುಗರ ಹುಡುಕಾಟ, ಹುಡುಗಾಟ ನಗೆಗಡಲಲ್ಲಿ ತೇಲಿಸುತ್ತದೆ. ಕೆಲ ಹಳೆಯ ಜೋಕ್ಗಳಿದ್ದರೂ ವಿಭಿನ್ನ ಕ್ಯಾರಕ್ಟರ್ಗಳು, ಹಿನ್ನೆಲೆ ಮತ್ತು ಕಾಮಿಡಿ ಮೂಲಕ ಮದರ್ ಸೆಂಟಿಮೆಂಟ್ ಬೆಸೆಯುವಲ್ಲಿ ನಿರ್ದೇಶಕನಾಗಿ ಪೂರ್ಣಚಂದ್ರ ಮೈಸೂರು ಗೆದ್ದಿದ್ದಾರೆ. ಹೀಗಾಗಿ ಹೆಚ್ಚು ನಿರೀೆ ಇಲ್ಲದೇ ಕೆಲ ಸಮಯ ಕುಳಿತು ಟೆನ್ಶನ್ ಫ್ರೀಯಾಗಿ ನಕ್ಕು ಬರಲು "ಮದರ್ ಪ್ರಾಮಿಸ್' ಮೋಸವಿಲ್ಲ!