ನ್ಯೂಸ್

ಆನೇಕಲ್​ನಲ್ಲಿ ಸಿಲಿಂಡರ್​ ಸ್ಫೋಟಕ್ಕೆ ಇಡೀ ಅಂಗಡಿಯೇ ಧ್ವಂಸ: ಓರ್ವ ವ್ಯಕ್ತಿಯ ಸ್ಥಿತಿ ಗಂಭೀರ

ಆನೇಕಲ್: ಸಿಲಿಂಡರ್​ ಸ್ಫೋಟಕ್ಕೆ ಇಡೀ ಅಂಗಡಿಯೇ ಧ್ವಂಸವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರಿನಲ್ಲಿ ನಡೆದಿದೆ.

ಮುತ್ತಾನಲ್ಲೂರು ಸರ್ಕಲ್​​ನಲ್ಲಿರುವ . ಸ್ಟವ್ ರಿಪೇರಿ ಅಂಗಡಿಯಲ್ಲಿ ಸಿಲಿಂಡರ್​ ಸ್ಫೋಟಗೊಂಡಿದ್ದು, ಇದರ ಪರಿಣಾಮ ಸುತ್ತಮುತ್ತಲಿನ ಅಂಗಡಿ, ಮನೆಗಳಿಗೂ ಹಾನಿಯಾಗಿದೆ. ಘಟನೆಯಲ್ಲಿ ವ್ಯಕ್ತಿಯೋರ್ವನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸೂರ್ಯಸಿಟಿ ಪೊಲೀಸರು ಅಂಗಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)