ಕರೊನಾ ಭೀತಿ ಒಂದೆಡೆಯಾದರೆ ಅಂಫಾನ್ ಚಂಡಮಾರುತದ ಹೊಡೆತಕ್ಕೆ ಪಶ್ಚಿಮ ಬಂಗಾಳ ನಲುಗಿ ಹೋಗಿದ್ದು, ಈವರೆಗೂ 80 ಮಂದಿ ಅಸುನೀಗಿದ್ದು, ಸಾಕಷ್ಟು ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ನಿನ್ನೆ (ಶುಕ್ರವಾರ) ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ವೈಮಾನಿಕ ಪರೀಕ್ಷೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಿದರು. ಅಲ್ಲದೆ, ರಾಜ್ಯಕ್ಕೆ 1 ಸಾವಿರ ಕೋಟಿ ರೂ. ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಮೋದಿ ಅವರ ವೈಮಾನಿಕ ಸಮೀಕ್ಷೆಯ ಫೋಟೋಗಳನ್ನು ಈ ಕೆಳಗೆ ಕಾಣಬಹುದಾಗಿದೆ.
ಅಂಫಾನ್ ಚಂಡಮಾರುತದಿಂದಾದ ಹಾನಿಯ ಪರಿಶೀಲನೆಗಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯಪಾಲ ಜಗದೀಪ್ ಧನಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಅಂಫಾನ್ ಅನಾಹುತಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಅಂಫಾನ್ ಅನಾಹುತವನ್ನು ವೀಕ್ಷಿಸಿ ಹೆಲಿಕಾಪ್ಟರ್‌ನಿಂದಿಳಿದು ಸುದ್ದಿಗೋಷ್ಠಿಯ ಸ್ಥಳದತ್ತ ಹೋಗುತ್ತಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಜಗದೀಪ್ ಧನಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಸಿಎಂ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್ ಧನಕರ್ ಜತೆ ಪ್ರಧಾನಿ ಮೋದಿ ಸಂವಾದ ನಡೆಸುತ್ತಿರುವುದು. ಅಂಫಾನ್ ವಿಕೋಪಕ್ಕೆ ಕಾರಿನ ಮೇಲೆ ಉರುಳಿಬಿದ್ದಿರುವ ಬೃಹತ್ ಮರ.ಅಂಫಾನ್ ರಭಸಕ್ಕೆ ಪಶ್ಚಿಮ ಬಂಗಾಳದಲ್ಲಿ ಬುಡಸಮೇತ ಧರೆಗುರುಳಿರುವ ಬೃಹತ್ ಮರ.ಅಂಫಾನ್ ಹೊಡೆತಕ್ಕೆ ರಸ್ತೆಗಳೆಲ್ಲಾ ಜಲಾವೃತಗೊಂಡು ನಡುನೀರಿನಲ್ಲಿ ಜನರು ಸಂಚರಿಸುತ್ತಿರುವುದು.ಅಂಫಾನ್ ರಭಸಕ್ಕೆ ಪಶ್ಚಿಮ ಬಂಗಾಳದಲ್ಲಿ ಬುಡಸಮೇತ ಧರೆಗುರುಳಿರುವ ಬೃಹತ್ ಮರ.ಅಂಫಾನ್ ರಭಸಕ್ಕೆ ಪಶ್ಚಿಮ ಬಂಗಾಳದಲ್ಲಿ ಬುಡಸಮೇತ ಧರೆಗುರುಳಿರುವ ಬೃಹತ್ ಮರವನ್ನು ಸ್ಥಳೀಯರು ತೆರವುಗೊಳಿಸುತ್ತಿರುವುದು.
ಅಂಫಾನ್ ಚಂಡಮಾರುತದ ಅಪ್ಪಳಕ್ಕೆ ಬಸ್ಸಿನ ಮೇಲೆ ಬಿದ್ದ ಮರ.ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಮತ್ತು ಮಮತಾ ಬ್ಯಾನರ್ಜಿ.ಕರೊನಾ ಭೀತಿ ಒಂದೆಡೆಯಾದರೆ ಅಂಫಾನ್ ಚಂಡಮಾರುತದ ಹೊಡೆತಕ್ಕೆ ಪಶ್ಚಿಮ ಬಂಗಾಳ ನಲುಗಿ ಹೋಗಿದ್ದು, ಈವರೆಗೂ 80 ಮಂದಿ ಅಸುನೀಗಿದ್ದು, ಸಾಕಷ್ಟು ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ನಿನ್ನೆ (ಶುಕ್ರವಾರ) ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ವೈಮಾನಿಕ ಪರೀಕ್ಷೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಿದರು. ಅಲ್ಲದೆ, ರಾಜ್ಯಕ್ಕೆ 1 ಸಾವಿರ ಕೋಟಿ ರೂ. ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಮೋದಿ ಅವರ ವೈಮಾನಿಕ ಸಮೀಕ್ಷೆಯ ಫೋಟೋಗಳನ್ನು ಈ ಕೆಳಗೆ ಕಾಣಬಹುದಾಗಿದೆ.