ನ್ಯೂಸ್

ಕಾರ್ಖಾನೆ ಬಸ್ ಗುದ್ದಿ ಸೈಕಲ್ ಸವಾರ ಸಾವು

ಬೆಂಗಳೂರು: ಸೈಕಲ್‌ಗೆ ಹಿಂದಿನಿಂದ ಕಾರ್ಖಾನೆ ಬಸ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾನೆ.

ಕದಿರೇನಹಳ್ಳಿ ನಿವಾಸಿ ಕೃಷ್ಣಾರೆಡ್ಡಿ (79) ಮೃತ ಸವಾರ. ಗುರುವಾರ ಮಧ್ಯಾಹ್ನ 12.30ರಲ್ಲಿ ಕದಿರೇನಹಳ್ಳಿಯಿಂದ ಕತ್ರಿಗುಪ್ಪೆಗೆ ಹೋಗುವಾಗ ಮಾರ್ಗಮಧ್ಯೆ ರಿಂಗ್ ರಸ್ತೆಯ ಅಶ್ವಿನಿ ಅಪಾರ್ಟ್‌ಮೆಂಟ್ ಬಳಿ ಅಪಘಾತ ಸಂಭವಿಸಿದೆ.

ಕೃಷ್ಣಾರೆಡ್ಡಿ ಅವರು ಕತ್ರಿಗುಪ್ಪೆಯಲ್ಲಿ ಕೆಲಸದ ಹಣ ಪಡೆದುಕೊಳ್ಳಲು ಸೈಕಲ್‌ನಲ್ಲಿ ಹೋಗುತ್ತಿದ್ದರು. ಹಿಂದಿನಿಂದ ವೇಗವಾಗಿ ಬಂದ ಕಾರ್ಖಾನೆ ಬಸ್, ಏಕಾಏಕಿ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ರಸ್ತೆಗೆ ಬಿದ್ದ ಕೃಷ್ಣಾರೆಡ್ಡಿ ಎದೆ ಮೇಲೆಯೇ ಖಾಸಗಿ ಬಸ್‌ನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬನಶಂಕರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.