ನ್ಯೂಸ್

ಸೈಬರ್ ವಂಚನೆ: 55 ಲಕ್ಷ ರೂ. ಹಣ ಕಳೆದುಕೊಂಡಿರುವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ| Kalyan Banerjee

ಕೋಲ್ಕತ್ತಾ: ಸೈಬರ್ ವಂಚನೆಯಲ್ಲಿ ನಾಲ್ಕು ಬಾರಿ ಸಂಸದರಾಗಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಕಲ್ಯಾಣ್ ಬ್ಯಾನರ್ಜಿ(Kalyan Banerjee) ಸುಮಾರು 55 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಶನಿವಾರ(ನ. 08) ವರದಿಯಾಗಿದೆ.

2001 ಮತ್ತು 2006 ರ ನಡುವಿನ ಅವಧಿಯಲ್ಲಿ ಪಶ್ಚಿಮ ಬಂಗಾಳದ ಅಸನ್ಸೋಲ್ (ದಕ್ಷಿಣ) ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಶಾಸಕರಾಗಿದ್ದ ವೇಳೆ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಲ್ಲಿ ಖಾತೆಯಲ್ಲಿ ಖಾತೆ ಹೊಂದಿದ್ದರೆನ್ನಲಾಗಿದೆ. ಈ ವೇಳೆ ಶಾಸಕರ ಸಂಬಳವನ್ನು ಆ ಖಾತೆಗೆ ಜಮಾ ಮಾಡಲಾಗಿತ್ತು. ಆಗ ಈ ಕ್ಷೇತ್ರ ಅವಿಭಜಿತ ಬುರ್ದ್ವಾನ್ ಜಿಲ್ಲೆಯ ಭಾಗವಾಗಿತ್ತು. ಈಗ ಪಶ್ಚಿಮ ಬುರ್ದ್ವಾನ್ ಜಿಲ್ಲೆಯಲ್ಲಿದೆ. ದೀರ್ಘಕಾಲದಿಂದ ಹಣ ವಹಿವಾಟು ಇಲ್ಲದ ಕಾರಣ ಖಾರೆ ನಿಷ್ಕ್ರೀಯವಾಗಿದೆ.

ಆದರೆ ಇತ್ತೀಚೆಗೆ ಕಲ್ಯಾಣ್ ಅವರು ಎಸ್‌ಬಿಐನ ಕಾಲಿಘಾಟ್ ಶಾಖೆಯಲ್ಲಿರುವ ತಮ್ಮ ವೈಯಕ್ತಿಕ ಖಾತೆಯಿಂದ ಆ ನಿಷ್ಕ್ರಿಯ ಖಾತೆಗೆ ಮೊದಲು 55 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ನಿಷ್ಕ್ರೀಯ ಖಾತೆಯಲ್ಲಿದ್ದ ಎಲ್ಲಾ 55 ಲಕ್ಷ ರೂಪಾಯಿ ವಂಚನೆಯಾಗಿದೆ ಎನ್ನಲಾಗಿದೆ. ತಕ್ಷಣ ಎಸ್​ಬಿಐ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ತಕ್ಷಣ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಮಾನಾಡಿರುವ ಸೈಬರ್ ಪೊಲೀಸ್ ಅಧಿಕಾರಿಯೊಬ್ಬರು, ಇಡೀ ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳನ್ನು ಸಹ ಸಂಪರ್ಕಿಸಲಾಗುತ್ತಿದೆ. ವಂಚಕರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಅದೇ ಸಮಯದಲ್ಲಿ, ಬ್ಯಾಂಕ್ ಅಧಿಕಾರಿಗಳು ಅವರ ಕಡೆಯಿಂದ ಏನಾದರೂ ಲೋಪವಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)