ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲಿನ ಉಗ್ರರ ದಾಳಿ ಸಂಬಂಧ ವಿಡಿಯೋ ಮತ್ತು ೆಟೋಗಳು ಒಳಗೊಂಡ ಅಪ್ಲಿಕೇಷನ್‌ಗಳು ಬಂದರೇ ಎಚ್ಚರ. ಇದೀಗ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿಯನ್ನು ಭಾವನಾತ್ಮಕವಾಗಿ ಬಳಸಿಕೊಂಡು ಮಾಲ್‌ವೇರ್ ಅಪ್ಲಿಕೇಷನ್ ಅನ್ನು ಮೊಬೈಲ್‌ಗೆ ಕಳುಹಿಸುವ ಮೂಲಕ ಹ್ಯಾಕ್ ಮಾಡಿ ವಂಚಿಸಲು ಸೈಬರ್ ಕಳ್ಳರು ಹವಣಿಸುತ್ತಿದ್ದಾರೆ. ಉಗ್ರರ ದಾಳಿಯ ಹೊಸ ವಿಡಿಯೋ ಮತ್ತು ಸ್ಥಳದಲ್ಲಿದ್ದ ಮಹಿಳೆಯರ ಹೇಳಿಕೆ ಇರುವುದಾಗಿ ಅಪ್ಲಿಕೇಷನ್ ಕಳುಹಿಸುತ್ತಾರೆ. ಇದರ ಮೇಲೆ ಕ್ಲಿಕ್ ಮಾಡಿ ವಾಟ್ಸ್‌ಆ್ಯಪ್ ಡಿಪಿ ಅಥವಾ ಸ್ಟೇಟಸ್ ಇಟ್ಟುಕೊಳ್ಳುವಂತೆ ಸಲಹೆ ನೀಡುತ್ತಾರೆ.
ಒಂದು ವೇಳೆ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಿದರೆ ಮೊಬೈಲ್ ಕಂಟ್ರೋಲ್ ಸೈಬರ್ ಕಳ್ಳರ ಕೈಗೆ ಸಿಗಲಿದೆ. ಆ ನಂತರ ಇ-ಮೇಲ್, ೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಹಣಕಾಸಿನ ವ್ಯಾಲೆಟ್‌ಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಾರೆ.
ಮೊಬೈಲ್‌ನಲ್ಲಿರುವ ಎಲ್ಲ ಡೇಟಾ ಸಂಗ್ರಹಿಸಿ ಖಾತೆಗೆ ಕನ್ನ ಹಾಕುವ ಸಾಧ್ಯತೆ ಇರಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಮೊದಲು ದೊಡ್ಡ ಕಂಪನಿಗಳಿಗೆ ಮಾಲ್‌ವೇರ್ ಸಂದೇಶಗಳನ್ನು ಕಳುಹಿಸಿ ಅವರ ಡೇಟಾ ಕದ್ದು ಬಿಟ್ ಕಾಯಿನ್ ಬೇಡಿಕೆ ಒಡ್ಡುತ್ತಿದ್ದರು ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ.