ಮಧ್ಯಪ್ರದೇಶದ ಕಾಸ್ಮೆಟಿಕ್ ಅಂಗಡಿಯೊಂದರಲ್ಲಿ 8 ತಿಂಗಳ ಮಗುವಿನ ಚೈನ್ ಕದ್ದ ಖದೀಮ 
ನ್ಯೂಸ್

ಕಾಸ್ಮೆಟಿಕ್ ಶಾಪ್‌ನಲ್ಲಿ ಕಿಲಾಡಿ ಕಳ್ಳನ ಕರಾಮತ್ತು: 8 ತಿಂಗಳ ಮಗುವಿನ ಸರ ಕದ್ದು ಎಸ್ಕೇಪ್! | Chain Snatching

ಕಾಸ್ಮೆಟಿಕ್ ಅಂಗಡಿಯಲ್ಲಿ 8 ತಿಂಗಳ ಮಗುವಿನ ಚೈನ್ ಕದ್ದ ಖದೀಮ

ಯಾರ ಗಮನಕ್ಕೂ ಬಾರದಂತೆ ಚಿನ್ನದ ಚೈನ್ ಕದ್ದು ಎಸ್ಕೇಪ್ ಆದ ಕಿಲಾಡಿ

ಮಗುವಿನ ಕೊರಳಿನಿಂದ ಸರ ಕದಿಯುವ ದೃಶ್ಯಾವಳಿ ಸಿಸಿಟಿವಿ ಲಭ್ಯ

Theft of a child's chain: ಜನರಿಂದ ಕಿಕ್ಕಿರಿದಿದ್ದ ಅಂಗಡಿಯೊಂದರಲ್ಲಿ ಎಂಟೇ ತಿಂಗಳ ಮಗುವಿನ ಕೊರಳಿನಲ್ಲಿದ್ದ ಚಿನ್ನದ ಚೈನ್ ಕದ್ದು ಖದೀಮನೊಬ್ಬ ಎಸ್ಕೇಪ್ ಆಗಿರುವ ಶಾಕಿಂಗ್ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಭಾರಿ ಜನಸಂದಣಿ ಇದ್ದರೂ ಯಾರ ಗಮನಕ್ಕೂ ಬಾರದಂತೆ ಈ ಕಳವು ಮಾಡಲಾಗಿದ್ದು, ಇಡೀ ಕೃತ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಭೋಪಾಲ್‌ನ ಪ್ರಸಿದ್ಧ ಕಾಸ್ಮೆಟಿಕ್ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಎತ್ತಿಕೊಂಡಿದ್ದ ಮಹಿಳೆ ಅಂಗಡಿಯಿಡುವವರ ಜೊತೆ ಮಾತನಾಡುವುದರಲ್ಲಿ ನಿರತರಾಗಿದ್ದರು. ಇದೇ ಸಮಯವನ್ನು ಕಾದಿದ್ದ ಕಳ್ಳ, ಮಗುವಿನ ಕೊರಳಿನಲ್ಲಿದ್ದ ದಾರವನ್ನು ಕತ್ತರಿಸಿ, ಅತ್ಯಂತ ಚಾಕಚಕ್ಯತೆಯಿಂದ ಚಿನ್ನದ ಚೈನ್ ಜಿಗಿದುಕೊಂಡಿದ್ದಾನೆ. ಸುತ್ತಲೂ ಹಲವು ಜನರಿದ್ದರೂ ಯಾರೊಬ್ಬರಿಗೂ ಅನುಮಾನ ಬಾರದಂತೆ ಆತ ಅಂಗಡಿಯಿಂದ ಕಾಲ್ಕಿತ್ತಿದ್ದಾನೆ.

ಸ್ವಲ್ಪ ಸಮಯದ ನಂತರ ಚೈನ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದ್ದು, ಮಗುವಿನ ಕುಟುಂಬಸ್ಥರು ತಕ್ಷಣ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಠಾಣಾಧಿಕಾರಿ ಅಲ್ಪನಾ ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್​)