ಬನ್ನೂರು: ಮಕ್ಕಳ ಪ್ರತಿಭೆಯನ್ನು ಹೊರತರುವಲ್ಲಿ ಸಾಂಸ್ಕೃತಿಕ ಉತ್ಸವದಂತಹ ಕಾರ್ಯಕ್ರಮಗಳು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ಸಿಂಡಿಕೇಟ್ ಸದಸ್ಯ ಡಾ.ಎಸ್.ಚಿಕ್ಕಮೊಗ ತಿಳಿಸಿದರು.
ಪಟ್ಟಣದ ಸಮೀಪದ ಅತ್ತಳ್ಳಿ ಗ್ರಾಮದ ಜಿಪಿಪಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ಎನ್ನುವುದು ಕಲಿಕೆಗಷ್ಟೇ ಮಾತ್ರ ಸೀಮಿತವಾಗಿರದೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು, ಅದಕ್ಕೆ ಮುಖ್ಯ ವೇದಿಕೆ ಕಲ್ಪಿಸಿ ಬೆಳವಣಿಗೆಗೆ ಸಹಕರಿಸುವುದು ಆಗಿದೆ. ಇಂತಹ ಕೆಲಸವನ್ನು ಜಿಪಿಪಿ ವಿದ್ಯಾಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಪಿಪಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಜಿ.ಪಿ.ಪ್ರಸನ್ನ ಮಾತನಾಡಿ, ನಮ್ಮ ತಂದೆ ಆಸೆಯಂತೆ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಿಂಡಿಕೇಟ್ ಸದಸ್ಯ ಡಾ.ಎಸ್.ಚಿಕ್ಕಮೊಗ, ಡಾ.ಬಿ.ಎನ್.ರವೀಶ್, ಶಿಕ್ಷಣಾಧಿಕಾರಿ ಜಿ.ಶೋಭಾ, ಜಿಪಿಪಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಿ.ಪಿ.ಪ್ರಕಾಶ್, ಕಾರ್ಯದರ್ಶಿ ಜಿ.ಪಿ.ಪ್ರಸನ್ನ, ಉಪಾಧ್ಯಕ್ಷ ಕೆಂಪೇಗೌಡ, ಜಿ.ಪಿ.ಪ್ರತಾಪ್, ಮುಖ್ಯಶಿಕ್ಷಕ ಬಿ.ಎಲ್.ವೆಂಕಟೇಶಮೂರ್ತಿ, ಗ್ರಾಪಂ ಅಧ್ಯಕ್ಷ ಸುನಿಲ್, ಶಿಕ್ಷಕರಾದ ಕೆಂಪೇಗೌಡ, ಪ್ರತಾಪ್, ಉಮೇಶ್, ಮನೋಜ್, ಶ್ವೇತಾ, ಸೋನಿಯಾ, ಆಶಾಲತಾ, ಲಿಖಿತಾ, ಮೇಘಾ, ಶ್ವೇತಾ ಎನ್. ಗೌಡ, ರೂಪಾಶ್ರೀ, ಪ್ರಿಯದರ್ಶಿನಿ, ನಹೀದಾಬಾನು, ಶಾಂತಮ್ಮ, ಭವ್ಯಾ, ನಂದಿತಾ, ಪರಮೇಶ್, ಶಿವಕುಮಾರ್, ನಾರಾಯಣ್, ಸುಧಾ, ನಾಗರತ್ನ ಉಪಸ್ಥಿತರಿದ್ದರು.