ಸಿಂಧನೂರಿನಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ತುರ್ವಿಹಾಳ ಪುರವರಮಠದ ಅಮರಗುಂಡಯ್ಯ ಶಿವಾಚಾರ್ಯರು, ಬಂಗಾರಿಕ್ಯಾಂಪ್ ಸದಾನಂದ ಸ್ವಾಮೀಜಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಚಂದ್ರಶೇಖರ ಹಿರೇಮಠ, ಸರಸ್ವತಿ ಪಾಟೀಲ್ ಇತರರಿದ್ದರು. 
ನ್ಯೂಸ್

ಹಿರಿಯರ ಗೌರವಿಸುವ ಗುಣ ಮೈಗೂಡಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಅಮರೇಶ ಮೈಲಾಪುರ ಸಲಹೆ
  • ಸಿಂಧನೂರಿನಲ್ಲಿ ಪ್ರತಿಭಾ ಪುರಸ್ಕಾರ
ಸಿಂಧನೂರು: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಪಾಲಕರ ಕರ್ತವ್ಯವಾಗಿದ್ದು, ಬಾಲ್ಯದಿಂದಲೇ ಹಿರಿಯರನ್ನು ಗೌರವಿಸುವುದು, ಪ್ರಾಮಾಣಿಕತೆ, ಶಿಸ್ತು ಕಲಿಸುವುದರೊಂದಿಗೆ ಆರಂಭವಾಗಬೇಕು ಎಂದು ಸಾಹಿತಿ ಅಮರೇಶ ಮೈಲಾಪುರ ಹೇಳಿದರು.
ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಇತ್ತೀಚೆಗೆ ಹಿರಿಯರನ್ನು ಗೌರವಿಸುವ ಗುಣ ಮಕ್ಕಳಲ್ಲಿ ಕಡಿಮೆಯಾಗುತ್ತಿದ್ದು, ಉತ್ತಮ ಸಂಸ್ಕಾರ ಬೆಳೆಸಿಕೊಂಡಲ್ಲಿ ಸಮಾಜ ನಿಮ್ಮನ್ನು ಗುರುತಿಸುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕ ಗುರಿಯೊಂದಿಗೆ ಸಾಧನೆಯತ್ತ ಮುನ್ನುಗ್ಗಬೇಕು. ಸಂಘವು ಸಂಕಷ್ಟದಲ್ಲಿದ್ದವರಿಗೆ ನೆರವಾಗಬೇಕು ಎಂದರು.
ತುರ್ವಿಹಾಳ ಪುರವರಮಠದ ಅಮರಗುಂಡಯ್ಯ ಶಿವಾಚಾರ್ಯರು ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಗೆ ವೀರಶೈವ ಮಠಗಳ ಕೊಡುಗೆ ಅಪಾರವಾಗಿದ್ದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಜತೆಗೆ ಪ್ರಸಾದ ಸಿಗುವಂತಾಗಿದೆ ಎಂದರು.
ಬಂಗಾರಿಕ್ಯಾಂಪಿನ ಸದಾನಂದ ಸ್ವಾಮೀಜಿ ಮಾತನಾಡಿ, ತಂದೆ-ತಾಯಿ ಬಗ್ಗೆ ಮಕ್ಕಳು ಗೌರವ ಭಾವ ಹೊಂದಬೇಕು. ನೌಕರರ ಸಂಘ ವಿಭಿನ್ನವಾದ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಾದರಿಯಾಗಬೇಕು ಎಂದು ತಿಳಿಸಿದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ, ಸಂಘದ ಚಟುವಟಿಕೆ ಚುರುಕುಗೊಳ್ಳುವ ನಿಟ್ಟಿನಲ್ಲಿ ಎಂಎಲ್ಸಿ ಬಸನಗೌಡ ಬಾದರ್ಲಿ ಅವರಿಂದ 50 ಸಾವಿರ ರೂ. ಕೊಡಿಸುವುದಾಗಿ ಭರವಸೆ ನೀಡಿದರು.
ತಾಪಂ ಮಾಜಿ ಸದಸ್ಯ ಚಂದ್ರಭೂಪಾಲ ನಾಡಗೌಡ, ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಕಸಾಪ ತಾಲೂಕು ಮಾಜಿ ಅಧ್ಯಕ್ಷೆ ಸರಸ್ವತಿ ಪಾಟೀಲ್ ಮಾತನಾಡಿದರು. ಮಹಾಸಭಾದ ಯುವ ಘಟಕ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ ಅಂಗಡಿ, ತಾಲೂಕು ಅಧ್ಯಕ್ಷ ರಾಮನಗೌಡ ಮಲ್ಕಾಪುರ, ಸಮಾಜದ ತಾಲೂಕು ಅಧ್ಯಕ್ಷ ಪಂಪನಗೌಡ ತಾವರಗೇರಾ, ಪ್ರಮುಖರಾದ ಡಾ.ಶರಣಬಸವ ದೇವರಡ್ಡಿ, ಬಸವರಾಜ ಸಾಹುಕಾರ, ಎನ್.ಅಮರೇಶ, ಎನ್.ರಾಮನಗೌಡ, ಮಲ್ಲನಗೌಡ ಮಾವಿನಮಡ್ಗು, ಮಲ್ಲಿಕಾರ್ಜುನ ಸಾಹುಕಾರ, ಪತ್ರಕರ್ತರಾದ ಚಂದ್ರಶೇಖರ ಬೆನ್ನೂರು, ಚಂದ್ರಶೇಖರ ಯರದಿಹಾಳ, ಅಮರೇಶ ಅಲಬನೂರು, ಎಚ್.ಜಿ.ಹಂಪಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಬಿ., ವೀ.ಲಿಂ.ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶೇಖರಯ್ಯಸ್ವಾಮಿ, ತಾಲೂಕು ಅಧ್ಯಕ್ಷ ಬಸವರಾಜ, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ನಂದಾ, ಗಿರಿಜಾ, ಪದ್ಮಾ ಸಜ್ಜನ್ ಇದ್ದರು.