ಬೆಂಗಳೂರು: ಕಾಂಗ್ರೆಸ್‍ನ ಬಾಗಿಲುಗಳು ಬಿಜೆಪಿಯ ನಾಯಕರಿಗಾಗಿ ತೆರೆದಿವೆ ಎಂದು ಡಾ ಜಿ. ಪರಮೇಶ್ವರ್ ಹೇಳಿದ್ದರು. ಕೆಲ ಬಿಜೆಪಿ ನಾಯಕರು ಕಾಂಗ್ರೆಸ್‍ಗೆ ಮರಳುತ್ತಾರೆ ಎನ್ನುವ ವಿಚಾರ ಹರಿದಾಡುತ್ತಿದ್ದರ ಬಗ್ಗೆ ಇದೀಗ ಸಿ.ಟಿ. ರವಿ ಕೂಡ ಹೇಳಿಕೆ ನೀಡಿದ್ದಾರೆ. ಮುನಿರತ್ನ ಕೂಡ ಈ ಕುರಿತಾಗಿ ಪ್ರತಿಕ್ರಿಯೆ ನೀಡಿ, ತಾವು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿ.ಟಿ. ರವಿ, “ಬಿಜೆಪಿ ಪಕ್ಷಬಿಟ್ಟು ಯಾರೂ ಹೋಗಲ್ಲ. ಈ ರೀತಿ ಸುದ್ದಿ ಹರಡಿಸುವ ಕೆಲಸ ಮಾಡಲಾಗುತ್ತಿದೆ. ನಾನು ಯಾರನ್ನು ಅಪನಂಬಿಕೆಯಿಂದ ನೋಡುವುದಿಲ್ಲ. ಲೋಕಸಭೆ ಚುನಾವಣೆಯ ನಂತರ ಸರ್ಕಾರ ಪತನ ಆಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ. ಯತ್ನಾಳ್ ಹೇಳಿಕೆಯನ್ನು ಲಘುವಾಗಿ ತೆಗೆದುಕೊಳ್ಳಲು ಆಗಲ್ಲ. ಯತ್ನಾಳ್ ಗೆ ಅವರದ್ದೇ ಮಾಹಿತಿ ಇರುತ್ತದೆ. ನಾನು ಸಮಚಿತ್ತದಿಂದ ಇದ್ದೇನೆ” ಎಂದಿದ್ದಾರೆ.
ಇದನ್ನೂ ಓದಿ: G Parameshwar Reacts On FIR Against Upendra | ಉಪೇಂದ್ರ ವಿರುದ್ಧ FIR ಬಗ್ಗೆ ಜಿ. ಪರಮೇಶ್ವರ್ ಪ್ರತಿಕ್ರಿಯೆ
ಇನ್ನು ಯತ್ನಾಳ್ ಹೇಳಿಕೆಯನ್ನು ಪರೋಕ್ಷವಾಗಿ ಬೆಂಬಲಿಸಿ ಹೇಳಿಕೆ ನೀಡಿರುವ ಸಿ.ಟಿ. ರವಿ, ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಾ “6 ತಿಂಗಳ ಬಳಿಕ ಕಾದುನೋಡಿ. 6 ತಿಂಗಳ ಬಳಿಕ ರಾಜಕೀಯದಲ್ಲಿ ಬದಲಾವಣೆ ಆಗಲಿದೆ” ಎಂದು ಹೇಳಿದ್ದಾರೆ.