ನ್ಯೂಸ್

ಭತ್ತ ಬೆಳೆದಾದ್ರೂ‌ ಕೊಡಲಿ, ಅಕ್ಕಿ ಕೊಂಡಾದ್ರೂ ತಂದು ಕೊಡಲಿ: ಕಾಂಗ್ರೆಸ್​ಗೆ​​ ಸಿ.ಟಿ. ರವಿ ಟಾಂಗ್!

ಮೋಹನ್​ ಶೆಟ್ಟಿ

ಚಿಕ್ಕಮಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಶಾಸಕ ಸಿ.ಟಿ ರವಿ(CT Ravi), ಅಕ್ಕಿ ವಿಚಾರದಲ್ಲಿ ರಾಜ್ಯ ಸರ್ಕಾರ ಭತ್ತ ಬೆಳೆದಾದ್ರೂ‌ ಕೊಡಲಿ, ಅಕ್ಕಿ ಕೊಂಡಾದ್ರೂ ತಂದು ಕೊಡಲಿ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿ.ಟಿ ರವಿ, "ಜನರಿಗೆ ಆಶ್ವಾಸನೆ‌ ಕೊಟ್ಟಿದ್ದು ಕಾಂಗ್ರೆಸ್! ಪೂರ್ಣ ಪ್ರಮಾಣದ ಉಚಿತ ಅಕ್ಕಿ‌ ಕೇಂದ್ರ‌ ಕೊಡುತ್ತಿದೆ. ರಾಜ್ಯ ಸರ್ಕಾರಕ್ಕೆ(State Government) ಇನ್ನೂ ಐದು ದಿನ ಸಮಯ ಇದೆ. ಭತ್ತ ಬೆಳೆದಾದರೂ‌ ತಂದು ಕೊಡಲಿ ಅಥವಾ ಅಕ್ಕಿ ಕೊಂಡಾದರೂ ತಂದು ಕೊಡಲಿ" ಎಂದು ಹೇಳಿದರು.

"ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳನ್ನು ಯಾವ ವಿಶ್ವಾಸದ ಮೇಲೆ‌ ಹೇಳಿದ್ದರೋ ಅದೇ ವಿಶ್ವಾಸದ ಮೇಲೆ ಕೊಡಬೇಕು! ಅದನ್ನು ಹೊರತುಪಡಿಸಿ ಮಳೆ‌ ಬಂದಿಲ್ಲ, ಭತ್ತ ಎಲ್ಲಿಂದ ಬೆಳೆದು ತಂದು ‌ಕೊಡಲಿ ಎಂದು ಹೇಳಿದ್ರೆ ಹೇಗೆ?" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.