CRPF: ನಕ್ಸಲರ ವಿರುದ್ಧದ ಕಾರ್ಯಾಚರಣೆಯ ಸಮಯದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ಸಿಆರ್‌ಪಿಎಫ್ ಓರ್ವ ಸಿಬ್ಬಂದಿ ಮೃತಪಟ್ಟಿರುವ ಘಟನೆ ಒಡಿಶಾದ ಸುಂದರ್ಗಢ ಜಿಲ್ಲೆಯಲ್ಲಿ ಶನಿವಾರ (ಜೂ.14) ನಡೆದಿದೆ.
ಸ್ಫೋಟದಲ್ಲಿ ಸಿಆರ್‌ಪಿಎಫ್ 134ನೇ ಬೆಟಾಲಿಯನ್ ಎಎಸ್ಐ ಸತ್ಯಬನ್ ಕುಮಾರ್ ಸಿಂಗ್ (34) ಅವರ ಎಡಗಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಅಲ್ಲಿ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Axiom-4 ಬಾಹ್ಯಾಕಾಶ ಮಿಷನ್ಗೆ ದಿನಾಂಕ ಫಿಕ್ಸ್; ಭಾರತೀಯ ಗಗನಯಾತ್ರಿ ಸುಭಾನ್ಶು ಶುಕ್ಲಾ ಪಯಣಕ್ಕೆ ಸಕಲ ಸಿದ್ಧತೆ
ಸುಮಾರು ಮೂರು ವಾರಗಳ ಹಿಂದೆ ಮಾವೋವಾದಿಗಳು ಬ್ಯಾಂಕೊ ಕಲ್ಲು ಕ್ವಾರಿಯಿಂದ ಸುಮಾರು ಐದು ಟನ್ ಸ್ಫೋಟಕ ವಸ್ತುಗಳನ್ನು ಲೂಟಿ ಮಾಡಿದ ಪ್ರಮುಖ ಘಟನೆಯ ನಂತರ ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಪರಿಶೀಲನೆ ನಡೆಸಲಾಗಿದೆ. ಅಂದಿನಿಂದ, ಕದ್ದ ವಸ್ತುಗಳನ್ನು ಪತ್ತೆಹಚ್ಚಲು ಮತ್ತು ಪ್ರದೇಶವನ್ನು ಸುರಕ್ಷಿತಗೊಳಿಸಲು ಭದ್ರತಾ ಪಡೆಗಳು ಅನೇಕ ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ. (ಏಜೆನ್ಸೀಸ್)