ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಶಂಕಿತ ಉಗ್ರರು ಪೊಲೀಸ್ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕಿದ್ದಾರೆ. ಆಗ್ನೇಯ ದೆಹಲಿಯ ಸರಾಯ್ ಕೇಲ್ ಖಾನ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಪೊಲೀಸ್ ಕಾರ್ಯಾಚರಣೆ ನಡೆದಿತ್ತು.
ಬಂಧಿತ ಉಗ್ರರನ್ನು ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ದೋರು ಗ್ರಾಮದ ನಿವಾಸಿ ಅಬ್ದುಲ್ ಲತೀಫ್ ಮಿರ್ (22) ಮತ್ತು ಕುಪ್ವಾರಾ ಜಿಲ್ಲೆಯ ಹಟ್ ಮುಲ್ಲಾ ಗ್ರಾಮದ ನಿವಾಸಿ ಅಶ್ರಫ್ ಖತಾನಾ (20) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ನ್ಯಾಯಾಧೀಶರ ಸೋಗಿನ ಖತರ್ನಾಕ್ ಕಳ್ಳಿಯ ಸೆರೆ
ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬಂಧಿತರಿಂದ 2 ಸೆಮಿ ಆಟೋಮೆಟಿಕ್ ಪಿಸ್ತೂಲ್ ಹಾಗೂ 10 ಸಜೀವ ಕಾಟ್ರಿರ್ಜ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆನ್ನಿಗೆ, ಸಿಆರ್ಪಿಎಫ್ ದೆಹಲಿಯಲ್ಲಿ ಕಟ್ಟೆಚ್ಚರ ಘೋಷಿಸಿದೆ. (ಏಜೆನ್ಸೀಸ್)