ಬೆಂಗಳೂರು: ವಿಧಾನಪರಿಷತ್ ಮಾಜಿ ಸದಸ್ಯ ದಯಾನಂದ್ ರೆಡ್ಡಿ ಅವರ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಲ್ಯಾಂಡ್ ಮಾರ್ಕ್ ಕಟ್ಟಡದಲ್ಲಿನ ಕಂಪನಿಯಲ್ಲಿದ್ದಂತಹ ಕೋಟ್ಯಂತರ ರೂ. ಬೆಳೆಬಾಳುವ ವಸ್ತುಗಳನ್ನು ಎಸ್‌ಬಿಐ ಬ್ಯಾಂಕ್‌ನ ಅಧಿಕಾರಿಗಳು ರ್ಸೆಸಿ ಆಕ್ಟ್ ದುರಪಯೋಗ ಪಡಿಸಿಕೊಂಡು ಕಳವು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಆನೇಕಲ್ ಕೋರ್ಟ್ ನಿರ್ದೇಶನದ ಮೇರೆಗೆ ಎ್ಐಆರ್ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಪೊಲೀಸರು ತನಿಖೆಯ ಭಾಗವಾಗಿ ಸೋಮವಾರ ಸ್ಥಳ ಮಹಜರು ನಡೆಸಿದರು.
ಮಹಜರು ಪ್ರಕ್ರಿಯೆ ಬಳಿಕ ಸುದ್ದಿಗಾರರೊಂದಿಗೆ ದಯಾನಂದ್ ರೆಡ್ಡಿ ಮಾತನಾಡಿ, ಎಲೆಕ್ಟ್ರಾನಿಕ್ ಸಿಟಿಯ ಮುಖ್ಯರಸ್ತೆಯಲ್ಲಿರುವ ಲ್ಯಾಂಡ್ ಮಾರ್ಕ್ ಕಟ್ಟಡದಲ್ಲಿ ತಮ್ಮ ಮಾಲೀಕತ್ವದ ಭಾರತ್ ಇನ್‌ರ್ಾ ಎಕ್‌ಸೆೆರ್ಟ್ ಮತ್ತು ಇಂಪೋರ್ಟ್ ಕಂಪನಿಯನ್ನು ೨೦೦೭ ರಲ್ಲಿ ಸ್ವಂತ ಬಂಡವಾಳದಲ್ಲಿ ಪ್ರಾರಂಭಿಸಲಾಗಿದ್ದು, ೨೦೦೯ ರಲ್ಲಿ ನಾನು ಬೊಮ್ಮಸಂದ್ರದ ಇಂಡಸ್ಟ್ರೀಯಲ್ ಏರಿಯಾದ ಅಧ್ಯಕ್ಷನಾಗಿದ್ದ ವೇಳೆ ಎಸ್‌ಬಿಐ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ನಮ್ಮ ಕಂಪನಿಗೆ ಭೇಟಿ ನೀಡಿ, ನಿಮ್ಮಗೆ ಏನಾದರೂ ಲೋನ್ ಬೇಕಾದರೆ ಹೇಳಿ ನಾವು ನೀಡುತ್ತೇವೆ ಎಂದಿದ್ದರು. ಅದಕ್ಕೆ ನಾನು ಸಾಲ ಮಾಡುವುದಿಲ್ಲ, ನಿಮ್ಮ ಲೋನ್ ನನಗೆ ಬೇಡ ಎಂದಿದೆ. ನಂತರ ನಾವು ವಿದೇಶದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವು. ಅದಕ್ಕೆ ನಾವು ಶೇ.೨೦ ರಷ್ಟು ಮುಂಗಡವಾಗಿ ಹಣವನ್ನು ವಿದೇಶಿ ಕಂಪನಿಗಳಿಗೆ ನೀಡಬೇಕಾಗಿತ್ತು. ಇದನ್ನು ಗಮನಿಸಿದ ಬ್ಯಾಂಕ್‌ನವರು ನೀವು ಮುಂಗಡ ಹಣವನ್ನು ನಗದು ರೂಪದಲ್ಲಿ ನೀಡುತ್ತಿದ್ದೀರಾ ಅದು ಮುಂದೆ ನಿಮಗೆ ಸಮಸ್ಯೆಯಾಗುತ್ತದೆ. ನಮ್ಮಲ್ಲಿ ಎಲ್‌ಸಿ ೆಲಿಸಿಟಿ ಅಂತಾ ಬ್ಯಾಂಕ್ ಗ್ಯಾರೆಂಟ್ ಇದೆ ಅದನ್ನು ನಿಮಗೆ ನೀಡುತ್ತೇವೆ ಎಂದು ಹೇಳಿದರು.
೭-೮ ಕೋಟಿ ರೂ. ಮೌಲ್ಯದ ವಸ್ತು ಕಳವು:
ಎಲ್‌ಸಿ ೆಲಿಸಿಲಿಟಿಯನ್ನು ನಮ್ಮ ಕಂಪನಿಗೆ ೨೦೦೯ ರಿಂದ ೨೦೧೫ರವೆಗೆ ನೀಡಿದರು. ನಂತರ ೨೦೧೫ ರಲ್ಲಿ ೧೧೦ ಕೋಟಿ ರೂ.ಎಲ್‌ಸಿ ಹಣ ಬಿಡುಗಡೆ ಮಾಡಿದರು. ನಂತರ ಅದೇ ವರ್ಷದಲ್ಲಿ ೨.೩ ಕೋಟಿ ರೂ. ಅನ್ನು ನನ್ನ ಖಾತೆಯಿಂದ ನನಗೆ ಗೊತ್ತಿಲ್ಲದ ಹಾಗೆ ಎಸ್‌ಬಿಐ ಲ್ೈ ಇನ್‌ಶೂರೆನ್ಸ್‌ಗೆ ವರ್ಗಾವಣೆ ಮಾಡಿದ್ದರು. ಅದರ ಮೂಲಕ ಕಮೀಷನರ್ ಪಡೆದುಕೊಂಡಿದ್ದರು. ನಾನು ಆಗ ವಿಲ್ಸನ್‌ಗಾರ್ಡ್ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ. ಅದಾದ ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ನನ್ನ ಹೆಸರಿಗೆ ಬಿಡುಗಡೆಯಾಗಿರುವ ೧೧೦ ಕೋಟಿ ರೂ. ಎಲ್‌ಸಿ ಹಣದಲ್ಲಿ ೧೦೧.೮೦ ಕೋಟಿ ರೂ. ನನ್ನ ಖಾತೆಯಿಂದ ಬೇರೆಯವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ೨೦೧೬ ಅ.೭ ಕ್ಕೆ ನಿಮ್ಮ ವ್ಯವಹಾರವೇ ನನಗೆ ಬೇಡ ಎಂದು ನಾನು ನನ್ನ ಖಾತೆಯನ್ನು ಮುಚ್ಚಿರುತ್ತೇನೆ. ನನ್ನ ಹೆಸರಿನಲ್ಲಿ ೧೦೧.೮೦ ಕೋಟಿ ರೂ. ಬೇರೆಯವರ ಖಾತೆಗೆ ವರ್ಗಾವಣೆಯಾಗಿರುವ ಸಂಬಂಧ ನಾನು ಮೊದಲು ಹೈಕೋರ್ಟ್‌ಗೆ ಮೊರೆ ಹೋಗುತ್ತೇನೆ.
ಆ ನಂತರ ಡಿಆರ್‌ಟಿಒ, ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ವೇದಿಕೆಯ ಮೊರೆ ಹೋಗುತ್ತೇವೆ. ಆಗ ಡಿಆರ್‌ಟಿಒ ಅವರು ಖಾತೆಯಲ್ಲಿ ಹಣ ವರ್ಗಾವಣೆಯಾಗಿರುವ ಬಗ್ಗೆ ವಿವರ ನೀಡುವಂತೆ ಬ್ಯಾಂಕ್‌ನವರಿಗೆ ಸೂಚಿಸುತ್ತಾರೆ. ಆ ಅಕೌಂಟ್ ಸ್ಟೆಟ್‌ಮೆಂಟ್ ನೀಡಲು ಬ್ಯಾಂಕ್‌ನವರು ೩ ವರ್ಷ ಸತಾಯಿಸುತ್ತಾರೆ. ನಂತರ ಅಕೌಂಟ್ ಸ್ಟೆಟ್‌ಮೆಂಟ್ ನೀಡುವಂತೆ ಬ್ಯಾಂಕ್‌ನವರಿಗೆ ಆದೇಶ ಮಾಡುತ್ತದೆ. ತದನಂತರ ಬ್ಯಾಂಕ್‌ನವರು ವಿವರ ನೀಡಿದ್ದು, ಅವರು ಕೂಡಲೇ ಎನ್‌ಸಿಆರ್‌ಟಿ ಮೊರೆ ಹೋಗುತ್ತಾರೆ. ನನ್ನ ಕಂಪನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸುತ್ತಾರೆ. ೨೦೨೦ ರಲ್ಲಿ ನನ್ನ ಕಂಪನಿಯ ಕಚೇರಿಯನ್ನು ಜಪ್ತಿ ಮಾಡುತ್ತಾರೆ. ಆ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲಾತಿಗಳನ್ನು ಕದ್ದಿದ್ದಾರೆ. ದಾಖಲಾತಿ ಕೇಳಿದರೆ ನೀಡುತ್ತಿಲ್ಲ. ನಂತರ ಕಚೇರಿ ಕೀಗಳನ್ನು ಕೋರ್ಟ್‌ಗೆ ನೀಡುತ್ತಾರೆ. ನಂತರ ಆ ಕೀಯನ್ನು ನಕಲಿ ಮಾಡಿಕೊಂಡು ಪ್ರತಿದಿನ ಕಚೇರಿಯಲ್ಲಿದ್ದ ವಸ್ತುಗಳನ್ನು ಕದ್ದಿದ್ದಾರೆ. ಇಲ್ಲಿಯವರೆಗೂ ಸುಮಾರು ೭-೮ ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಕೋರ್ಟ್ ನಿದೇಶನದ ಮೇಲೆ ಎ್ಐಆರ್ ದಾಖಲಾಗಿದ್ದು, ಈ ಮಧ್ಯೆ ಬ್ಯಾಂಕಿನವರು ೨೦೨೪ ಜುಲೈ ೩ ರಂದು ಕೋರ್ಟ್‌ನಲ್ಲಿರುವ ಕೀಯನ್ನು ಪಡೆದು ಕಂಪನಿಯ ಕೀ ತೆಗೆದು, ದಾಖಲಾತಿಗಳನ್ನು ಕದ್ದು ನಂತರ ಜು. ೧೨ ರಂದು ಕೀಯನ್ನು ವಾಪಸ್ ಕೋರ್ಟ್‌ಗೆ ನೀಡುತ್ತಾರೆ. ೧೦೧ ಕೋಟಿ ರೂ.ಅನ್ನು ಆರಾಧ್ಯ ಎಂಬ ಕಂಪನಿ ಹೆಸರಿಗೆ ವರ್ಗಾವಣೆಯಾಗಿದೆ ಎಂದು ಆರೋಪಿಸಿದ್ದಾರೆ.