ರಿಪ್ಪನ್‌ಪೇಟೆ ಸಮೀಪದ ಕಲ್ಲೂರಿನಲ್ಲಿ ಭತ್ತದ ಗದ್ದೆಯಲ್ಲಿ ಕಾಡಾನೆ ಹೆಜ್ಜೆಗುರುತು.  
ನ್ಯೂಸ್

ಕಾಡಾನೆ ದಾಳಿಯಿಂದ ಬೆಳೆ ಹಾನಿ

ರಿಪ್ಪನ್‌ಪೇಟೆ: ಕಳೆದ ಮೂರು ದಿನಗಳಿಂದ ಹೊಲ ಗದ್ದೆಗಳ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಗಳು ಬೆಳೆಗಳನ್ನು ಹಾನಿಗೊಳಿಸುತ್ತಿವೆ. ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದ ಪೂರ್ಣೇಶ, ತಿಮ್ಮಪ್ಪ, ರಾಜಕುಮಾರ್, ಹೆದ್ದಾರಿಪುರದ ನಾಗರಾಜ ಶೆಟ್ಟಿ, ನಿತಿನ್, ನಾರಾಯಣ ಶೆಟ್ಟಿ ಎಂಬುವವರ ಭತ್ತದ ಗದ್ದೆ, ಅಡಕೆ ತೋಟ, ಬಾಳೆ ತೋಟಗಳನ್ನು ಹಾನಿಮಾಡಿವೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಂಚಿನಲ್ಲಿಯೇ ವಾಸ್ತವ್ಯ ಹೂಡಿದ್ದು, ಆನೆಗಳ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಕಾಡಿನೆಗಳು ಇಲಾಖೆಯವರ ಕಣ್ಣಿಗೆ ಬೀಳದೆ ರಾತ್ರಿ ಹೊಲ, ಗದ್ದೆಗಳಿಗೆ ದಾಳಿ ಮಾಡುತ್ತಿವೆ.