ನವದೆಹಲಿ: ಇಲ್ಲಿಯವರೆಗೆ ನೀವು ಅನೇಕ ಬಾರಿ ನದಿಗಳು ಅಥವಾ ಪ್ರಾಣಿಸಂಗ್ರಹಾಲಯಗಳಲ್ಲಿ ಮೊಸಳೆಗಳನ್ನು ನೋಡಿರುತ್ತೀರಿ. ಮೊಸಳೆಗಳ ಹತ್ತಿರ ಹೋಗಲೂ ಜನ ನಡುಗುತ್ತಾರೆ. ಅಂತಹದ್ದರಲ್ಲಿ ನೀವು ಮನೆಯಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ ನೆಲ ನಡುಗಿದಂತೆ ಆಗಿ ಅಲ್ಲಿಂದ ಮೊಸಳೆ ಹೊರಗೆ ಬಂದರೆ ಹೇಗಾಗಬಹುದು?
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನೆಲದಿಂದ ಮೊಸಳೆಗಳು ಹೊರ ಬರುವ ವಿಡಿಯೋಗಳು ವೈರಲ್ ಆಗುತ್ತಿದ್ದು ಇದು ನೋಡಲು ಬಹು ವಿಚಿತ್ರವಾಗಿದೆ. ನೆಲದಿಂದ ಒಂದರ ನಂತರ ಒಂದರಂತೆ ಮೂರು ಮೊಸಳೆಗಳು ಹೊರಬರುತ್ತಿರುವುದನ್ನು ಕಾಣಬಹುದು. ಈ ಘಟನೆ ಎಲ್ಲಿ ನಡೆದದ್ದು ಎನ್ನುವುದು ತಿಳಿದುಬಂದಿಲ್ಲ.
ಈ ವಿಡಿಯೋವನ್ನು ಟ್ವಿಟರ್‍ನಲ್ಲಿ ಹಲವಾರು ಖಾತೆಗಳು ಹಂಚಿಕೊಂಡಿವೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ನೆರೆಹೊರೆಯವರಿಗೆ ಮನೆಯ ಕೆಳಗಿನಿಂದ ಏನೋ ಸ್ವಲ್ಪ ಶಬ್ದ ಬರುತ್ತಿದೆ ಎಂದು ಎನಿಸಿತ್ತು. ಯಾರಾದರೂ ಕೆಳಗಿನಿಂದ ನೆಲವನ್ನು ಬಡಿಯುತ್ತಾರೆ ಎನಿಸುವಂತೆ ಈ ಶಬ್ದ ಕೇಳಿಸುತ್ತಿತ್ತು. ಆದರೆ ನೆಲದ ಮೇಲೆ ಸಿಮೆಂಟ್ ಪ್ಲ್ಯಾಸ್ಟರ್ ಹಾಕಲಾಗಿತ್ತು. ಭಯದಿಂದ ನಡುಗುತ್ತಿದ್ದರೂ ಸುತ್ತಲಿದ್ದವರು ಕುತೂಹಲ ತಾಳಲಾರದೇ ಹತ್ತಿರ ಹೋಗಿ ನೋಡುತ್ತಿದ್ದರು. ಮೊಸಳೆ ಸಿಮೆಂಟ್ ಕೆಳಗೆ ಸಿಕ್ಕಿಕೊಂಡಿರುವುದು ಕೇಳಿಸಿದೆ.
ಈ ಯುವಕರು ಪ್ಲ್ಯಾಸ್ಟರ್ ಅನ್ನು ಮುರಿಯಲು ಪ್ರಾರಂಭಿಸಿದ ತಕ್ಷಣ, 3 ಮೊಸಳೆಗಳು ನೆಲದಿಂದ ಹೊರಬಂದಿವೆ. ಇದನ್ನು ನೋಡಿ, ಅಲ್ಲಿರುವ ಜನರು ಆಘಾತಕ್ಕೊಳಗಾಗಿದ್ದರು. ನೀವು ನೋಡಬಹುದಾದ ವೀಡಿಯೊದಲ್ಲಿ, ಬೂಟುಗಳು ಮತ್ತು ಕೆಂಪು ಉಡುಪುಗಳನ್ನು ಧರಿಸಿದ ವ್ಯಕ್ತಿಯು ಮೊಸಳೆ ನಿಯಂತ್ರಿಸಲು ಪ್ರಯತ್ನಿಸುತ್ತಾನೆ. ಮೊಸಳೆ ತಡೆಯಲು ಇನ್ನೂ ಕೆಲವು ಜನರು ಪ್ರಯತ್ನಿಸುತ್ತಿದ್ದಾರೆ. ಇದನ್ನು ನೋಡಿದ ನಂತರ ಜಗತ್ತಿನಲ್ಲಿ ಏನು ಬೇಕಾದರೂ ಸಂಭವಿಸಬಹುದು ಎನ್ನುವುದನ್ನು ನಂಬಲೇ ಬೇಕಾಗಿದೆ.
@mksinfo.ofic ಎಂಬ ಖಾತೆಯಿಂದ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಲಾದ ಈ ವೀಡಿಯೊವನ್ನು 10 ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕಾಮೆಂಟ್ ವಿಭಾಗದಲ್ಲಿ ನಾನಾ ರೀತಿಯಲ್ಲಿ ಜನರು ಪ್ರತಿಕ್ರಿಯೆ ನೀಡುತ್ತಿರುವುದನ್ನು ಕಾಣಬಹುದಾಗಿದೆ.