ನ್ಯೂಸ್

ನನ್ನನ್ನು ರೂಮಿಗೆ ಕರೆದು… ಕ್ರಿಸ್ಟಿಯಾನೋ ರೊನಾಲ್ಡೋ ವಿರುದ್ಧ ಗಂಭೀರ ಆರೋಪ ಮಾಡಿದ ಮಾಡೆಲ್!​

ನವದೆಹಲಿ: ಫುಟ್ಬಾಲ್​ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ ವಿರುದ್ಧ ವೆನೆಜುವೆಲಾ ಮೂಲದ ಮಾಡೆಲ್ ಹಾಗೂ ಪ್ರಭಾವಿ ಬ್ಲಾಗರ್​ ಜಾರ್ಜಿಲಾಯ ಎಂಬುವರು ಗಂಭೀರ ಆರೋಪ ಮಾಡಿದ್ದು, ರೊನಾಲ್ಡೋ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ.

ರೊನಾಲ್ಡೋ ಜೊತೆ ಸೆಲ್ಫಿ ತೆಗೆದುಕೊಂಡು ನಂಬರ್​ ವಿನಿಮಯ ಮಾಡಿಕೊಂಡ ಬಳಿಕ ಅವರ ಆಹ್ವಾನದ ಮೇರೆಗೆ ಅವರಿದ್ದ ಕೊಠಡಿಗೆ ಹೋದಾಗ ನಡೆದ ಘಟನೆಯನ್ನು ಇನ್​ಸ್ಟಾಗ್ರಾಂನಲ್ಲಿ ಜಾರ್ಜಿಲಾಯ ಬರೆದುಕೊಂಡಿದ್ದಾರೆ. ರೊನಾಲ್ಡೋ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಇದನ್ನು ರೊನಾಲ್ಡೋ ತಿರಸ್ಕರಿಸಿದ್ದಾರೆ.

ನಾನು ರೊನಾಲ್ಡೋ ಅವರಿಂದ ಬಂದ ಮೆಸೇಜ್​ ಓದಿದಾಗ, ನಾನು ಹೋಗಿ ಕೇವಲ ಮಾತನಾಡಿಕೊಂಡು ಬರಬಹುದು ಮತ್ತು ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಬಹುದು ಹಾಗೂ ಅವರರೊಂದಿಗೆ ಇನ್ನಷ್ಟು ಫೋಟೋಗಳನ್ನು ತೆಗೆದುಕೊಳ್ಳಬಹುದು ಅಂತ ಭಾವಿಸಿದೆ. ಆ ಸನ್ನಿವೇಶದಲ್ಲಿ ಅಲ್ಲಿ ಲೈಂಗಿಕತೆ ಇರುತ್ತದೆ ಎಂದು ನಾನು ಸ್ವಲ್ಪವೂ ಯೋಚನೆ ಮಾಡಿರಲಿಲ್ಲ. ಅಂದು ನಡೆದಿದ್ದು ಇದೆ ಎಂದು ಜಾರ್ಜಿಲಾಯ ಬರೆದುಕೊಂಡಿದ್ದಾರೆ.

ಲೈಂಗಿಕ ಕ್ರಿಯೆಗೆ ನನ್ನ ಕಡೆಯಿಂದಲೂ ಸಮ್ಮತಿಸಿ ಇತ್ತು. ಆದರೆ, ಅದರ ಹೊರತಾಗಿಯ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಖ್ಯಾತಿ ಮತ್ತು ಶಕ್ತಿಯ ಕೈಚಳಕಕ್ಕೆ ಮಾರು ಹೋದೆ ಎಂದು ಜಾರ್ಜಿಲಾಯ ಹೇಳಿದ್ದಾರೆ.

ಈಗಾಗಲೇ ಐದು ಮಕ್ಕಳ ತಂದೆಯಾಗಿರುವ ರೊನಾಲ್ಡೋ ತಮ್ಮ ಪತ್ನಿ ಜಾರ್ಜಿನಾ ರೊಡ್ರಿಗಸ್ ಜೊತೆ ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇದೀಗ ವೆನೆಜುವೆಲಾ ಮಾಡೆಲ್​ ಮಾಡಿರುವ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದು, ತನ್ನ ವಿರುದ್ಧದ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ರೊನಾಲ್ಡೋ ಮಾಧ್ಯಮ ವಕ್ತಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೊನಾಲ್ಡೋ ವಿರುದ್ಧ ಕೇಳಿಬಂದಿರುವ ಆರೋಪ ಸತ್ಯಕ್ಕೆ ದೂರವಾದದ್ದು ಮತ್ತು ಮಾನಹಾನಿ ಉದ್ದೇಶವನ್ನು ಒಳಗೊಂಡಿದೆ. ಎಂದು ಹೇಳಿದ್ದಾರೆ.

2022ರ ಮಾರ್ಚ್ 25ರಂದು ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ಗಾಗಿ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಮಾಡೆಲ್ ಜಾರ್ಜಿಲಾಯ ಹೇಳಿಕೊಂಡಿದ್ದಾರೆ. ಅಲ್ಲದೆ, ರೊನಾಲ್ಡೊ ಜತೆ ಲೈಂಗಿಕತೆ ಅನುಭವಿಸಿದ ಬಳಿಕ ತನ್ನ ಪತಿಯಿಂದ ತುಂಬಾ ಪೀಡಿಸಲ್ಪಟ್ಟಿರುವುದಾಗಿ ಮತ್ತು ವಿಚ್ಛೇದನದ ಅಂಚಿಗೆ ತಳ್ಳಿತು ಎಂದು ಜಾರ್ಜಿಲಾಯ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)