ನ್ಯೂಸ್

ಸಾರ್ವಜನಿಕವಾಗಿ ತಪ್ಪೊಪ್ಪಿಕೊಂಡು ಪುಷ್ಪ ಚಿತ್ರದ ಡೈಲಾಗ್ ಹೊಡೆದ ಅಪರಾಧಿ

ಪಶ್ಚಿಮ ಬಂಗಾಳ: ‘ಪುಷ್ಪ ದಿ ರೈಸ್’ ಸಿನಿಮಾದ ಅನೇಕ ಡೈಲಾಗ್​​​ಗಳು ಸಾಕಷ್ಟು ಫೇಮಸ್ ಆಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಚಿತ್ರದ ಡೈಲಾಗ್​​​ಗಳ ಕುರಿತು ಲೆಕ್ಕವಿಲ್ಲದಷ್ಟು ರೀಲ್‌ಗಳು ಮತ್ತು ವಿಡಿಯೋಗಳನ್ನು ಮಾಡಲಾಗಿದೆ. ನಾಯಕ ಪುಷ್ಪ ಸ್ವಾಭಿಮಾನದಿಂದ ಹೇಳುವ ‘ಮೈನ್ ಜುಕೇಗಾ ನಹೀ ಸಾಲಾ’ ಡೈಲಾಗ್ ಅನ್ನು ಪುನರಾವರ್ತಿಸುವ ಅನೇಕ ಕ್ರಿಮಿನಲ್‌ಗಳು ಇದ್ದಾರೆ.

ಅಂದಹಾಗೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ, ಅಪರಾಧಿಯೊಬ್ಬ ಅಪರಾಧ ಮಾಡಿದ ನಂತರ ಪೊಲೀಸರ ಮುಂದೆ ಈ ಸಂಭಾಷಣೆಯನ್ನು ಪುನರಾವರ್ತಿಸಿದ್ದಾನೆ. ಅಪರಾಧಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಶ್ಚಿಮ ಬಂಗಾಳದ ಮಟಿಗಾರದಲ್ಲಿ ಕಳ್ಳತನದ ಆರೋಪದ ಮೇಲೆ ಬಂಧಿತನಾದ ಆರೋಪಿ, ಬಂಧನದಲ್ಲಿದ್ದರೂ ಪೊಲೀಸ್ ವ್ಯಾನ್‌ನಲ್ಲಿ ಕುಳಿತು ಮಾಧ್ಯಮಗಳಿಗೆ ತಾನು ಕಳ್ಳನೆಂದು ಹೇಳುತ್ತಾನೆ. ಆತನನ್ನು ಮಾಧ್ಯಮದವರು ಪ್ರಶ್ನಿಸಿದಾಗ, ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಲ್ಲದೆ "ನಾನು ಬಗ್ಗೋದೆ ಇಲ್ಲ..." ಎನ್ನುತ್ತಾನೆ. ನಟ ಅಲ್ಲು ಅರ್ಜುನ್ ಡೈಲಾಗ್ ಹೇಳಿದ ನಂತರ ಚಿತ್ರದಲ್ಲಿ ತೋರಿಸಿರುವಂತೆ ಈ ಕ್ರಿಮಿನಲ್ ಕೂಡ ಆಕ್ಷನ್ ಮಾಡಿರುವುದನ್ನು ನೋಡಬಹುದು.

ಮಾಹಿತಿ ಮೇರೆಗೆ ಮಟಿಗಾರ ಪೊಲೀಸರು ಲಕ್ಷಗಟ್ಟಲೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿ ಸಿಲಿಗುರಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದರು. ಆದರೆ ನ್ಯಾಯಾಲಯದಲ್ಲಿ ವಿಚಾರಣೆಯ ಸಮಯದಲ್ಲಿ, ಅವರು ಪುಷ್ಪ ಅವರ "ನಾನು ಬಗ್ಗೋದೆ ಇಲ್ಲ..." ಎಂಬ ಸಂಭಾಷಣೆಯನ್ನು ಹೇಳಿದ್ದಾನೆ.