ತೆಲಸಂಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಜರುಗಿತು. ಪಿಎಸ್‌ಐ ಎಸ್.ಡಿ.ಆಸಂಗಿ, ಶಿವಾನಂದ ಹಾಲೊಳ್ಳಿ, ಜೆ.ಐ.ಪಟೆಗಾರ ಇತರರು ಇದ್ದರು. 
ನ್ಯೂಸ್

ಅಪರಾಧ ಹೆಚ್ಚಳ ಕಳವಳಕಾರಿ

ತೆಲಸಂಗ: ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ, ಬಾಲ್ಯ ವಿವಾಹ, ಪೋಕ್ಸೋ ಸೈಬರ್ ಅಪರಾಧ ಸೇರಿ ಕಾನೂನು ಕುರಿತು ತಿಳಿವಳಿಕೆ ಹೊಂದುವುದು ಅಗತ್ಯ ಎಂದು ಪಿಎಸ್‌ಐ ಎಸ್.ಡಿ.ಆಸಂಗಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಗಳಿ ಪೊಲೀಸ್ ಠಾಣೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಈಚೆಗೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಳ ಸೇರಿ ಯುವಕರೇ ಹೆಚ್ಚು ಕಾನೂನು ಉಲ್ಲಂಘಿಸುತ್ತಿರುವುದು ಕಳವಳಕಾರಿ. ವಿದ್ಯಾರ್ಥಿಗಳು ಜಾಗರೂಕತೆಯಿಂದ ಮೊಬೈಲ್ ಬಳಕೆ ಮಾಡುವ ಮೂಲಕ ಆನ್‌ಲೈನ್ ವಂಚನೆಯಿಂದ ತಪ್ಪಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಶಿವಾನಂದ ಹಾಲೊಳ್ಳಿ, ಪೊಲೀಸ್ ಸಿಬ್ಬಂದಿ ಜೆ.ಐ.ಪಟೆಗಾರ, ಎಸ್.ಎಚ್.ಸನಗೊಂಡ ಇತರರು ಇದ್ದರು.