ನ್ಯೂಸ್

48 ವರ್ಷದ ಬಳಿಕ ಬಾಲ್ಯದ ದಿನಗಳನ್ನು ಕಳೆದ ಮನೆ ತೊರೆದ ಸೌರವ್​ ಗಂಗೂಲಿ: ದುಬಾರಿ ಬೆಲೆಯಲ್ಲಿ ಹೊಸ ಮನೆ ಖರೀದಿ

ಕೋಲ್ಕತ್ತಾ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ತಮ್ಮ ತವರೂರಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ಈ ಬಗ್ಗೆ ತಮ್ಮ ಅಭಿಮಾನಿಗಳಲ್ಲಿ ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಧ್ಯ ಕೋಲ್ಕತ್ತಾದ ಲೋಯೆನ್​ ರಾಡನ್​ ಸ್ಟ್ರೀಟ್​​​ನಲ್ಲಿ ಬರೋಬ್ಬರಿ 40 ಕೋಟಿ ರೂ. ಬೆಲೆಯ ಐಷಾರಾಮಿ ಮನೆಯನ್ನು ಗಂಗೂಲಿ ಖರೀದಿಸಿದ್ದಾರೆ.

ಎರಡು ಅಂತಸ್ತಿನ ಕಟ್ಟಡವಾಗಿರುವ ಈ ಮನೆ ಐಷಾರಾಮಿ ಕಟ್ಟಡವಾಗಿದೆ. ಪ್ರಸ್ತುತ 48 ವರ್ಷಗಳಿಂದ ತಮ್ಮ ಬಾಲ್ಯದ ದಿನಗಳನ್ನು ಕಳೆದ ಮನೆಯಲ್ಲೇ ವಾಸಿಸುತ್ತಿದ್ದ ಗಂಗೂಲಿ ಸದ್ಯಕ್ಕೆ ತನಗೆ ಅನುಕೂಲವಾಗುವಂತೆ ಹೊಸ ಮನೆಯಲ್ಲೇ ವಾಸವಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಸದ್ಯ ತಮ್ಮ ಹೊಸ ಮನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)