ಆನೇಕಲ್‌ ಮೈದಾನದಲ್ಲಿ ಬ್ಯಾಟ್, ವಿಕೆಟ್ ಹಿಡಿದು ಅಟ್ಟಾಡಿಸಿ ಹೊಡೆದಾಟ 
ನ್ಯೂಸ್

ರಣರಂಗವಾದ ಕ್ರಿಕೆಟ್ ಕ್ರೀಡಾಂಗಣ! ಆನೇಕಲ್‌ನಲ್ಲಿ ಬ್ಯಾಟ್, ವಿಕೆಟ್ ಹಿಡಿದು ಸಿನಿ ಸ್ಟೈಲ್ ಫೈಟ್ | Anekal Cricket Clash

  • ಆನೇಕಲ್‌ನಲ್ಲಿ ಕ್ರಿಕೆಟ್ ಟೂರ್ನಿ ವೇಳೆ ಮಾರಾಮಾರಿ

  • 'ಅಂಬಾರಿ ಕಪ್' ಕ್ರಿಕೆಟ್ ಟೂರ್ನಿಯಲ್ಲಿ ನಡೆದ ಹೈಡ್ರಾಮಾ

  • ಆಟಗಾರರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ

  • ಕ್ರಿಕೆಟ್ ಬ್ಯಾಟ್ವಿ-ಕೆಟ್ ಬಳಸಿ ಹಲ್ಲೆ, ಇಬ್ಬರಿಗೆ ಗಾಯ

Anekal Cricket Clash: ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ಕ್ರಿಕೆಟ್ ಮೈದಾನ ಅಕ್ಷರಶಃ ಕುಸ್ತಿ ಅಖಾಡವಾಗಿ ಬದಲಾಗಿದೆ. 'ಅಂಬಾರಿ ಕಪ್-2026' ಟೂರ್ನಿಯ ಪಂದ್ಯದ ವೇಳೆ ಆಟಗಾರರ ನಡುವೆ ಹುಟ್ಟಿಕೊಂಡ ಸಣ್ಣದೊಂದು ಕಿಡಿ, ನೋಡನೋಡುತ್ತಿದ್ದಂತೆಯೇ ಭಾರಿ ಮಾರಾಮಾರಿಗೆ ತಿರುಗಿದೆ. ಈ ಬಡಿದಾಟದಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಆನೇಕಲ್ ಪಟ್ಟಣದ ಎಎಸ್‌ಬಿ ಕ್ರೀಡಾಂಗಣದಲ್ಲಿ ಅಂಬಾರಿ ಕಪ್-2026 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ವಿವಿಧ ಪ್ರದೇಶಗಳಿಂದ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದವು. ಪಂದ್ಯದ ವೇಳೆ ಆಟಗಾರರ ನಡುವೆ ಯಾವುದೋ ವಿಚಾರಕ್ಕೆ ಸಣ್ಣ ಮಟ್ಟಿನ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಆದರೆ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ಆಟಗಾರರು ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ.

ಕ್ರಿಕೆಟ್ ಬ್ಯಾಟ್ -ವಿಕೆಟ್‌ ಹಿಡಿದು ಹೊಡೆದಾಟ

ಈ ವೇಳೆ ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟ್‌ಗಳನ್ನು ಹಿಡಿದು ಆಟಗಾರರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಸಂಪೂರ್ಣ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ದೃಶ್ಯಗಳು ಈಗ ವೈರಲ್​ ಆಗಿವೆ.

ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು

ಆಟಗಾರರ ನಡುವಿನ ಗಲಾಟೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: ಸಿಲಿಗುರಿಯಲ್ಲಿ ತಂದೆ-ಮಗನ ಮೇಲೆ ಕಾಡಾನೆ ದಾಳಿ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ! | Elephant Attack

ಈ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆಟಗಾರರ ನಡುವಿನ ಸಣ್ಣ ವಿವಾದ ಕ್ರಿಕೆಟ್ ಪಂದ್ಯಾವಳಿಯಲ್ಲೇ ದೊಡ್ಡ ಗಲಾಟೆಗೆ ಕಾರಣವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.