ನ್ಯೂಸ್

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕ್ರಿಕೆಟ್​ ಕೋಚ್​ ಬಂಧನ| Child abuse

Child abuse: ತನ್ನ ಬಳಿ ಕ್ರಿಕೇಟ್​ ಕೋಚ್​ ಪಡೆಯುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕ್ರಿಕೆಟ್​ ಕೋಚ್​ವೊಬ್ಬರನ್ನು ದಿಯೋನಾರ್​ ಪೊಲೀಸರು ಮಂಗಳವಾರ (ಆ.5) ಬಂಧಿಸಿದ್ದಾರೆ.

ಆರೋಪಿ ರಾಜೇಂದ್ರ ನಾನಾಸಾಹೇಬ್​ ಪವಾರ್​ (37) ಎಂದು ತಿಳಿದುಬಂದಿದೆ. ಈತ ಪೊಲೀಸರ ಗಮನಕ್ಕೆ ಬಂದಿರುವುದು ಇದೇ ಮೊದಲಲ್ಲ. 2023 ರಲ್ಲಿ ಅದೇ ಪೊಲೀಸ್​ ಠಾಣೆಯಲ್ಲಿ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಿದ್ದರು ಎನ್ನಲಾಗಿದೆ.

ಪ್ರಕರಣದ ಬಗ್ಗೆ

ಪೊಲೀಸರ ಪ್ರಕಾರ, ಬಾಲಕಿ ಘಾಟ್ಕೋಪರ್ ನಿವಾಸಿ ಎಂದು ತಿಳಿದುಬಂದಿದೆ. ಅದೇ ಊರಿನ ಗೋವಂಡಿ ಪ್ರದೇಶದ ಮೈದಾನದಲ್ಲಿರುವ ಪವಾರ್ ಅವರ ಕ್ರಿಕೆಟ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇನ್ನು ಪವಾರ್ ಈ ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡು, ಮೇ 28 ರಿಂದ ಆಗಸ್ಟ್ 4 ರ ನಡುವೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಕಿರುಕುಳದ ಬಗ್ಗೆ ಬಾಲಕಿಯು ತನ್ನ ಕುಟಂಬಸ್ಥರಿಗೆ ತಿಳಿಸಿದ್ದು, ಕುಟುಂಬಸ್ಥರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ತನಿಖೆ ನಡೆಸಿದ ದಿಯೋನಾರ್​ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಕಾಯ್ದೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪವಾರ್​ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.(ಏಜೆನ್ಸೀಸ್​)