ನ್ಯೂಸ್

ಕ್ರೆಡಿಟ್ ವಾರ್; ಪ್ರಧಾನಿ ಕೊಲ್ಕೊತ್ತಾ ಭೇಟಿಗೂ ಮುನ್ನವೇ, ಇಂದು ಹಳೆಯ ನೆನಪು ಕಾಡಲಿ; ಮಮತಾ ಬ್ಯಾನರ್ಜಿ| Credit War ​

Credit War: ಪ್ರಧಾನಿ ನರೇಂದ್ರ ಮೋದಿ ಇಂದು ಬಿಹಾರ ಮತ್ತು ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆಯನ್ನು ಮಾಡ್ತಿದ್ದಾರೆ. ಇದೇ ವೇಳೆ ಕೊಲ್ಕೊತ್ತಾದಲ್ಲಿ ಮೆಟ್ರೋ ವಿಸ್ತರಣೆಯನ್ನು ಪ್ರಧಾನಿ ಉದ್ಘಾಟನೆ ಮಾಡ್ತಿದ್ದಾರೆ.

ಕೊಲ್ಕೊತ್ತಾದ ಮೂರು ಹೊಸ ಮೆಟ್ರೋ ಮಾರ್ಗಗಳಾದ ಸೀಲ್ಡಾದಿಂದ ಎಸ್ಪ್ಲನೇಡ್ (ಹಸಿರು ಮಾರ್ಗ, 2.6 ಕಿ.ಮೀ), ನೊಪರಾದಿಂದ ಜೈ ಹಿಂದ್ ಬಿಮನ್ಬಂದರ್ (ಹಳದಿ ಮಾರ್ಗ, 6.77 ಕಿ.ಮೀ), ಮತ್ತು ಹೇಮಂತ ಮುಖ್ಯೋಪಾಧ್ಯಾಯದಿಂದ ಬೆಲೆಘಾಟ (ಕಿತ್ತಳೆ ಮಾರ್ಗ, 4.39 ಕಿ.ಮೀ)  ಇಂದು ಪ್ರಧಾನಿ ಉದ್ಘಾಟನೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಕೊಲ್ಕೊತ್ತಾ ಮೆಟ್ರೋ ಜಾಲ ವಿಸ್ತರಣೆ ಉದ್ಘಾಟನೆಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಕ್ರೆಡಿಟ್ ವಾರ್ ನಡೆದಿದೆ. ಸದ್ಯ ಪ್ರಧಾನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ದೂರ ಉಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಮಮತಾ ಬ್ಯಾನರ್ಜಿ, ಇಂದು ಹಳೆಯ ನೆನಪು ಕಾಡಲಿ ಎಂದು ಕೊಲ್ಕೊತ್ತಾ ಮೆಟ್ರೋ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಶ್ರಮದ ಸುದೀರ್ಘವಾಗಿ ಪೋಸ್ಟ್ ಹಾಕಿದ್ದಾರೆ.

"ಭಾರತದ ರೈಲ್ವೆ ಸಚಿವೆಯಾಗಿ ಕೋಲ್ಕತ್ತಾ ಮಹಾನಗರದಲ್ಲಿ ಮೆಟ್ರೋ ರೈಲ್ವೆ ಕಾರಿಡಾರ್‌ಗಳ ಸರಣಿಯನ್ನು ಯೋಜಿಸುವ ಮತ್ತು ಮಂಜೂರು ಮಾಡುವ ಅದೃಷ್ಟ ನನ್ನದಾಗಿತ್ತು. ನಾನು ನೀಲನಕ್ಷೆಗಳನ್ನು ರಚಿಸಿದ್ದೆ, ಅದಕ್ಕೆ ಹಣ ವ್ಯವಸ್ಥೆಯನ್ನು ಮಾಡಿದ್ದೆ, ಕಾಮಗಾರಿಗಳನ್ನು ಪ್ರಾರಂಭಿಸಿದ್ದೆ. ನಗರದ ವಿವಿಧ ಭಾಗಗಳನ್ನು (ಜೋಕಾ, ಗರಿಯಾ, ವಿಮಾನ ನಿಲ್ದಾಣ, ಸೆಕ್ಟರ್ V, ಇತ್ಯಾದಿ) ಮೆಟ್ರೋ ಮೂಲಕ್ಕೆ ಸಂಪರ್ಕಿಸಬಹುದು ಎಂದು ಖಚಿತಪಡಿಸಿಕೊಂಡೆ".

ನಂತರ, ಪಶ್ಚಿಮ ಬಂಗಾಳದ ಸಿಎಂ ಆಗಿ ಯೋಜನೆಗಳ ಅನುಷ್ಠಾನದಲ್ಲಿ ಭಾಗವಹಿಸುವ ಹೆಚ್ಚುವರಿ ಸವಲತ್ತು ನನಗೆ ಸಿಕ್ಕಿತು. ರಾಜ್ಯದಿಂದ, ನಾನು ಉಚಿತ ಭೂಮಿ, ಸುಸಜ್ಜಿತ ರಸ್ತೆಗಳನ್ನು ವ್ಯವಸ್ಥೆಗೊಳಿಸಿದೆ, ಸ್ಥಳಾಂತರಗೊಂಡ ಜನರಿಗೆ ಪುನರ್ವಸತಿಯನ್ನು ವ್ಯವಸ್ಥೆಗೊಳಿಸಿದೆ. ಅಡೆತಡೆಗಳನ್ನು ತೆಗೆದುಹಾಕಿದೆ. ಯೋಜನೆಗಳ ಅನುಷ್ಠಾನದಲ್ಲಿ ಎಲ್ಲಾ ಸಹಾಯವನ್ನು ಮಾಡಿದೆ. ಅನುಷ್ಠಾನ ಸಂಸ್ಥೆಗಳ ಏಕೀಕರಣವನ್ನು ಖಚಿತಪಡಿಸಿಕೊಳ್ಳಲು ನಮ್ಮ ಮುಖ್ಯ ಕಾರ್ಯದರ್ಶಿಗಳು ಸತತವಾಗಿ ಸಮನ್ವಯ ಸಭೆಗಳನ್ನು ನಡೆಸಿದರು. ರೈಲ್ವೆ ಸಚಿವೆಯಾಗಿ ಮಾಡಿ ಅನುಷ್ಠಾನ ಈಡೇರಿಕೆಯಲ್ಲಿನ ನನ್ನ ಪೂರ್ಣ ಪಾತ್ರವಿದೆ.

ಮೆಟ್ರೋ ವಿಸ್ತರಿಸುವುದು ನನಗೆ ದೀರ್ಘವಾದ ಕನಸು. ಇಂದು ನನಗೆ ಸ್ವಲ್ಪ ಹಳೆಯ ನೆನಪು ಕಾಡಲಿ ಎಂದು ಬರೆದಿದ್ದಾರೆ. (ಏಜೆನ್ಸೀಸ್)