ತ್ಯಾಗರ್ತಿಯಲ್ಲಿ ಏರ್ಪಡಿಸಿದ್ದ ಯುವಜನ ಬಳಗದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ನೌಕರ ಪುರುಷೋತ್ತಮ ಮತ್ತು ಅಥ್ಲೀಟ್ ಪೂರ್ವಿ ಅವರನ್ನು ಸನ್ಮಾನಿಸಲಾಯಿತು, ಇಸಾಕ್, ನಟರಾಜ್, ಗಿರೀಶ್ ಇತರರಿದ್ದರು. 
ನ್ಯೂಸ್

ಕನ್ನಡ ಸಾಹಿತ್ಯ, ಸಂಸ್ಕೃತಿಯ ಅರಿವು ಮೂಡಿಸಿ

ತ್ಯಾಗರ್ತಿ: ಕನ್ನಡ ಭಾಷೆ, ಸಾಹಿತ್ಯ ಉಳಿಸಲು ಗ್ರಾಮೀಣ ಶಾಲಾ ಶಿಕ್ಷಕರ ಕೊಡುಗೆ ಅಪಾರ ಎಂದು ಯುವಜನ ಬಳಗದ ಅಧ್ಯಕ್ಷ ಇಸಾಕ್ ಹೇಳಿದರು.

ಕಾಗೋಡು ತಿಮ್ಮಪ್ಪ ವೃತ್ತದಲ್ಲಿ ಏರ್ಪಡಿಸಿದ್ದ 17ನೇ ವರ್ಷದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಬೇಕು ಎಂದು ತಿಳಿಸಿದರು.

ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಟಿ.ನಟರಾಜ್ ಮಾತನಾಡಿ, ಪಾಲಕರು ಮಕ್ಕಳಿಗೆ ಇಂಗ್ಲಿಷ್ ಕಲಿಸುವ ವ್ಯಾಮೋಹದಿಂದ ಕನ್ನಡದ ಮಹತ್ವ ಕಡಿಮೆಯಾಗುತ್ತಿದೆ ಎಂದರು.

ಕನ್ನಡ ಧ್ವಜಾರೋಹಣ ನೆರವೇರಿಸಿದ ನಿವೃತ್ತ ನೌಕರ ಪುರುಷೋತ್ತಮ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಅಥ್ಲೀಟ್ ಪೂರ್ವಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಭುವನೇಶ್ವರಿ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾಮಕ್ಕಳು ಹಾಗೂ ಶಿಕ್ಷಕರು ಮೆರವಣಿಗೆ ನಡೆಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕಪ್ಪ, ಸದಸ್ಯ ಗಿರೀಶ್, ಶಿಕ್ಷಕರಾದ ಸಂದೀಪ್, ಸರ್ವೇಶ್, ವಸುಂಧರಾ, ಸುಮಂಗಲಾ, ಅಂಬಿಕಾ , ನಾಗರಾಜ್, ಪ್ರದೀಪ್ ಇತರರಿದ್ದರು.