ನ್ಯೂಸ್

ಶಾಲೆಗೆ ಬಂದಿದ್ದ ಮಕ್ಕಳಿಗೆ ಚಾಕುವಿನಿಂದ ಇರಿದು, ಗಾಯಗೊಳಿಸಿದ ಸೆಕ್ಯೂರಿಟಿ ಗಾರ್ಡ್; 39 ವಿದ್ಯಾರ್ಥಿಗಳಿಗೆ ಗಾಯ

ಬೀಜಿಂಗ್​: ದಕ್ಷಿಣ ಚೀನಾದ ವುಜೋ ಸಿಟಿಯಲ್ಲಿರುವ ಸೆಂಟ್ರಲ್​ ಪ್ರೈಮರಿ ಶಾಲೆಯಲ್ಲಿ ಬೆಳಗ್ಗೆ 8.30ರ ಸುಮಾರಿಗೆ ನಡೆದ ಚೂರಿ ಇರಿತದ ದಾಳಿಯಲ್ಲಿ ಸುಮಾರು 39 ಪುಟ್ಟಪುಟ್ಟ ಮಕ್ಕಳು ಮತ್ತು ಶಾಲೆಯ ಕೆಲವು ಸಿಬ್ಬಂದಿ ತೀವ್ರ ಗಾಯಗೊಂಡಿದ್ದಾರೆ.

ಅದೇ ಪ್ರೈಮರಿ ಶಾಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಲಿ ಕ್ಸಿಯಾಮಿನ್ (50) ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಕ್ಯೂರಿಟಿ ಗಾರ್ಡ್​ ಮಕ್ಕಳು, ಶಾಲಾ ಸಿಬ್ಬಂದಿಗೆ ಮನಬಂದಂತೆ ಇರಿದಿದ್ದಾನೆ. ಗಾಯಗೊಂಡ ಪುಟ್ಟಪುಟ್ಟ ಮಕ್ಕಳನ್ನು ಅವರ ಪಾಲಕರು, ಪೊಲೀಸರು ಶಾಲೆಯಿಂದ ಎತ್ತಿಕೊಂಡು ಹೋಗುತ್ತಿರುವ ಫೋಟೋ, ವಿಡಿಯೋಗಳು ಎಲ್ಲೆಡೆ ವೈರಲ್​ ಆಗಿವೆ.

ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಸೆಕ್ಯೂರಿಟಿ ಗಾರ್ಡ್​ ಯಾಕೆ ಮಕ್ಕಳಿಗೆ ಚಾಕುವಿನಿಂದ ಇರಿದ ಎಂಬುದು ಇನ್ನೂ ಗೊತ್ತಾಗಿಲ್ಲ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)