ನ್ಯೂಸ್

ಸಿಪಿಐ(ಎಂ)ಗೆ ನಿಷೇಧ; ಅದರ 7 ಅಂಗಸಂಸ್ಥೆಗಳೂ ಒಂದು ವರ್ಷ ಬ್ಯಾನ್​

ಹೈದರಾಬಾದ್​: ಕಮ್ಯುನಿಸ್ಟ್​ ಪಾರ್ಟಿ ಆಫ್​ ಇಂಡಿಯಾ (ಮಾವೊಯಿಸ್ಟ್​) ಹಾಗೂ ಅದರ ಏಳು ಅಂಗಸಂಸ್ಥೆಗಳನ್ನು ಒಂದು ವರ್ಷ ಕಾಲ ನಿಷೇಧಕ್ಕೊಳಪಡಿಸಲಾಗಿದೆ. ಇಂಥದ್ದೊಂದು ನಿಷೇಧ ಇದೇ ವರ್ಷದ ಆಗಸ್ಟ್​ 17ರಿಂದಲೇ ಅನ್ವಯಿಸಲಿದೆ.

ಸಿಪಿಐ(ಎಂ) ಜತೆಗೆ ಅದರ ಅಂಗಸಂಸ್ಥೆಗಳಾದ ರೆವೊಲ್ಯುಷನರಿ ಡೆಮಾಕ್ರಟಿಕ್​ ಫ್ರಂಟ್​(ಆರ್​ಡಿಎಫ್​), ರ‍್ಯಾಡಿಕಲ್​ ಯೂಥ್ ಲೀಗ್, ರಿಥು ಕೂಲಿ ಸಂಘಂ, ರ‍್ಯಾಡಿಕಲ್ ಸ್ಟುಡೆಂಟ್ಸ್ ಯೂನಿಯನ್​, ಸಿಂಗರೇನಿ ಕಾರ್ಮಿಕ ಸಮಖ್ಯ, ವಿಪ್ಲವ ಕಾರ್ಮಿಕ ಸಮಖ್ಯ ಮತ್ತು ಆಲ್​ ಇಂಡಿಯಾ ರೆವೊಲ್ಯುಷನರಿ ಸ್ಟುಡೆಂಟ್ಸ್​ ಫೆಡರೇಷನ್​ ಕೂಡ ನಿಷೇಧಕ್ಕೆ ಒಳಗಾಗಿವೆ.

ತೆಲಂಗಾಣ ರಾಜ್ಯದಲ್ಲಿ ಈ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಪಬ್ಲಿಕ್ ರಿಲೇಷನ್ಸ್ ಕಮಿಷನರ್ ಅರವಿಂದ್ ಕುಮಾರ್ ಮಾಹಿತಿ ನೀಡಿದ್ದಾರೆ. ಕಾನೂನುಬಾಹಿರ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿದ್ದು, 2020ರ ಆಗಸ್ಟ್​ 17ರಿಂದ ಒಂದು ವರ್ಷ ಈ ನಿಷೇಧ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)