ನ್ಯೂಸ್

ಚಿರತೆ ದಾಳಿಗೆ ಹಸು ಬಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಹಲಗೂರು: ತೊರೆ ಕಾಡನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಚಿರತೆಯೊಂದು ದಾಳಿ ಮಾಡಿ ಹಸುವನ್ನು ಕೊಂದುಹಾಕಿದೆ.

ಮೂಲತಃ ತೊರೆ ಕಾಡನಹಳ್ಳಿ ಗ್ರಾಮದ ವಾಸಿ, ವೆಂಕಟೇಗೌಡ ಅವರ ಪುತ್ರ ಶ್ರೀನಿವಾಸಗೌಡ ಅವರು ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ತಮ್ಮ ಜಮೀನಿನಲ್ಲಿ ಕಟ್ಟಿ ಹಾಕಿ ಕೊಟ್ಟಿಗೆಯನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಹಸುವಿನ ಚೀರಾಟ ಕೇಳಿ ಓಡಿ ಬಂದಾಗ ಚಿರತೆ ಹಸುವಿನ ಮೇಲೆ ದಾಳಿ ನಡೆಸಿ ಓಡಿ ಹೋಗಿದೆ. ಅಷ್ಟರಲ್ಲಾಗಲೇ ಹಸು ಮೃತಪಟ್ಟಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ನೊಂದ ರೈತ ಮನವಿ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಬೋನು ಇಡಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ವಾಸಿಗಳಾದ ಶಿವರಾಜೇಗೌಡ, ಕೆಂಪ ದಾಸೇಗೌಡ, ರಾಮಚಂದ್ರಗೌಡ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.