ಬೆಂಗಳೂರು: ರಾಜ್ಯದಲ್ಲಿ ಇಂದೂ ಕೂಡ ಕರೊನಾ ಸೋಂಕಿತರ ಸಂಖ್ಯೆ ನಿನ್ನೆಯಂತೆಯೇ 5 ಸಾವಿರದ ಗಡಿ ದಾಟಿದೆ. ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆವರೆಗೆ ಒಟ್ಟು 5,007 ಹೊಸ ಪ್ರಕರಣಗಳು ವರದಿಯಾಗಿವೆ.
ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ 24 ತಾಸಿನಲ್ಲಿ 110 ಜನರು ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ಇಳಿಮುಖವಾಗಿದ್ದ ಸಾವಿನ ಸಂಖ್ಯೆ ಮತ್ತೆ ಶತಕದಾಚೆ ಸಾಗಿದೆ. ಒಟ್ಟು ಸಾವಿನ ಪ್ರಮಾಣ 1,724 ಆಗಿದೆ.
ಇದನ್ನೂ ಓದಿ; ಕೋವಿಡ್ ನಿರ್ವಹಣೆಗೆ ಸಿಬ್ಬಂದಿ ಕೊರತೆ; ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಕೆಲಸ; ತಜ್ಞರಿಗೆ ವೇತನ ಹೆಚ್ಚಳ
ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 85,870 ಆಗಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 52,971 ಆಗಿದೆ. ಒಟ್ಟು 611 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 2,037 ಆಗಿರುವುದು ಕೊಂಚ ಸಮಾಧಾನದ ಸಂಗತಿ.
ಇನ್ನು, ರಾಜ್ಯದಲ್ಲಿ ನಿಗಾವಣೆಯಲ್ಲಿರುವ ಪ್ರಥಮ ಸಂಪರ್ಕದವರು 70,440, ದ್ವಿತೀಯ ಸಂಪರ್ಕದವರು 60,541 ಮಂದಿ. ಒಟ್ಟು 29,819 ಜನರ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜಧಾನಿಯಲ್ಲಿಯೂ ಇಂದಿನ ಒಟ್ಟು ಕೇಸ್ಗಳು 2,267. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 41,467 ಆಗಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 30,561. ಸಾವಿನ ಸಂಖ್ಯೆ ಕೂಡ ಏರಿಕೆಯಾಗಿದ್ದು, 50 ಜನರು ಮೃತಪಡುವುದರೊಂದಿಗೆ ಬೆಂಗಳೂರಿನಲ್ಲಿ ಕೋವಿಡ್ನಿಂದ ಒಟ್ಟು ಸಾವಿನ ಪ್ರಮಾಣ 833ಕ್ಕೆ ತಲುಪಿದೆ. ನಿನ್ನೆಗೆ ಹೋಲಿಸಿದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ ಕಡಿಮೆಯಾಗಿದ್ದು ಇಂದು 746 ಜನರು ಚೇತರಿಕೆ ಕಂಡಿದ್ದಾರೆ.
ಜಿಲ್ಲಾವಾರು ಕೋವಿಡ್ ಅಂಕಿ-ಅಂಶ ಇಲ್ಲಿದೆ.