ನ್ಯೂಸ್

ಕೋವಿಡ್ 19 ಚಿಕಿತ್ಸೆ: ಸಂಪುಟದಲ್ಲಿ ಚರ್ಚಿಸಿ ದರ ನಿಗದಿ

malli

ಬೆಂಗಳೂರು: ಮುಂದಿನ ಸಂಪುಟ ಸಭೆಯಲ್ಲಿ ರ್ಚಚಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆ ದರ ನಿಗದಿಪಡಿಸಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ಉದ್ದೇಶಿತ ದರ *ಸಾಮಾನ್ಯ ವಾರ್ಡ್ 5,200 ರೂ. *ಆಕ್ಸಿಜನ್ ಸೌಲಭ್ಯ 7,500 ರೂ. *ರೆಸಿಪಿರೇಟರ್ ಸಿಸ್ಟಮ್ ಒಳಗೊಂಡಿದ್ದರೆ 8,700 ರೂ. * ಐಸಿಯು 12,000 ರೂ.

ವಿಧಾನಸೌಧದಲ್ಲಿ ನಡೆದ ಟಾಸ್ಕ್ ಪೋರ್ಸ್ ಸಭೆ ಬಳಿಕ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಪರೀಕ್ಷೆಗೆ ಹೆಚ್ಚು ಹಣ ತೆಗೆದುಕೊಳ್ಳುತ್ತಾರೆಂಬ ಬಗ್ಗೆ ದೂರುಗಳು ಬಂದಿದ್ದು, ಪೂರಕವಾದ ದರವನ್ನು ಶೀಘ್ರವೇ ನಿಗದಿ ಮಾಡಲಾಗುವುದು ಎಂದರು. ಇಂತಿಷ್ಟೇ ದರ ನಿಗದಿ ಆಗಬೇಕು ಅಂತ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಮನವಿ ಮಾಡಿದೆ. ಹೀಗಾಗಿ ಅವರ ಮನವಿ ಪರಿಶೀಲಿಸಿ ಮತ್ತು ಬೇರೆ ರಾಜ್ಯದಲ್ಲಿರುವ ದರ ಪರಿಶೀಲಿಸಿ ಅಂತಿಮ ತೀರ್ಮಾನ ಮಾಡಬೇಕಾಗಿದೆ ಎಂದರು.

ಸಭೆಯಲ್ಲಿ ಡಾಕ್ಟರ್ ಹಾಗೂ ನಸ್​ಗಳನ್ನು ಶಿಪ್ಟ್​ಮೇಲೆ ಕ್ವಾರೆಂಟೈನ್ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.