ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ಗಂಟೆ ಅವಧಿಯಲ್ಲಿ ಹೊಸತಾಗಿ 337 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8281ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ ಇಂದು 10 ಆಗಿದ್ದು ಒಟ್ಟು ಸಾವಿನ ಸಂಖ್ಯೆ 124 ಆಗಿದೆ. ನಾಲ್ಕು ಪ್ರಕರಣಗಳಲ್ಲಿ ಸಾವು ಅನ್ಯಕಾರಣಗಳಿಗೆ ಸಂಭವಿಸಿವೆ.
ಇಂದು ಆಸ್ಪತ್ರೆಯಿಂದ ಸೋಂಕು ಮುಕ್ತರಾಗಿ ಬಿಡುಗಡೆಯಾದವರು 230. ಇದುವರೆಗೆ ಸೋಂಕು ಮುಕ್ತರಾದವರ ಸಂಖ್ಯೆ 5210. ಐಸಿಯುನಲ್ಲಿ ಚಿಕಿತ್ಸೆಪಡೆಯುತ್ತಿರುವವರ ಸಂಖ್ಯೆ 78. ಸಕ್ರಿಯವಾಗಿರುವ ಸೋಂಕಿತರ ಸಂಖ್ಯೆ 2943. ಇಂದಿನ ಒಟ್ಟು ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯವರು 11, ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯವರು 93.
ಜಿಲ್ಲಾವಾರು ಲೆಕ್ಕಾಚಾರ ಗಮನಿಸಿದರೆ ಬೆಂಗಳೂರಿನಲ್ಲೇ ಗರಿಷ್ಠ 132 ಹೊಸ ಪ್ರಕರಣಗಳು ಖಚಿತವಾಗಿವೆ. ಕಲುಬರಗಿ 52, ಬಳ್ಳಾರಿ 37, ಹಾಸನ 18, ದಕ್ಷಿಣ ಕನ್ನಡ 13 ಹೊಸ ಪ್ರಕರಣಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ. ಇದುವರೆಗಿನ ಒಟ್ಟು ಪ್ರಕರಣಗಳ ಲೆಕ್ಕ ನೋಡಿದರೆ ಟಾಪ್ 5ರ ಪಟ್ಟಿಯಲ್ಲಿ ಕಲಬುರಗಿ ಒಂದನೇ ಸ್ಥಾನದಲ್ಲಿದ್ದು 1126 ಪ್ರಕರಣವಿದೆ. ಉಡುಪಿ 1050, ಬೆಂಗಳೂರು ನಗರ 982, ಯಾದಗಿರಿ 877, ದಕ್ಷಿಣ ಕನ್ನಡ 414 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಪೂರ್ಣ ವಿವರಗಳಿಗೆ ಕೆಳಗಿನ ಗ್ಯಾಲರಿಯನ್ನು ಗಮನಿಸಬಹುದು.