ನ್ಯೂಸ್

ಕರೊನಾ ವೈರಸ್​ಗೆ ದಾವಣಗೆರೆಯ 69 ವರ್ಷದ ವೃದ್ಧ ಸಾವು; ಇವರ ಸಂಪರ್ಕಕ್ಕೆ ಬಂದಿದ್ದ ಐವರಲ್ಲಿ ಸೋಂಕು

ದಾವಣಗೆರೆ: ಜಿಲ್ಲೆಯಲ್ಲಿ ಕರೋನಾ ಸೋಂಕಿಗೆ ಮೊದಲ ಬಲಿಯಾಗಿದೆ. ಇಲ್ಲಿನ ಜಾಲಿನಗರದ 69 ವರ್ಷದ ವೃದ್ಧ, ಪೇಷೆಂಟ್​ ನಂಬರ್​ 556 ಕರೊನಾದಿಂದ ಸಾವನ್ನಪ್ಪಿದ್ದಾರೆ.

ಕರೊನಾ ಸೋಂಕಿಗೆ ತುತ್ತಾಗಿದ್ದ ಅವರಿಗೆ ಡಯಾಬಿಟಿಸ್​ ಇತ್ತು. ಹಾಗೇ ಮೊದಲಿನಿಂದಲೂ ಉಸಿರಾಟದ ಸಮಸ್ಯೆ ಇತ್ತು. ಸದ್ಯ ರಾಜ್ಯದಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿದೆ.

ಮೃತ ವೃದ್ಧರ ಸಂಪರ್ಕಕ್ಕೆ ಬಂದಿದ್ದ ಒಟ್ಟು 9 ಮಂದಿ ಸದ್ಯ ಕ್ವಾರಂಟೈನ್​ನಲ್ಲಿದ್ದಾರೆ. ಇವರ ಮೂವರು ಸೊಸೆಯರು, ಓರ್ವ ಪುತ್ರ, ಮೊಮ್ಮಗನಿಗೆ ಸೋಂಕು ತಗುಲಿದೆ ಎಂದು ಅಲ್ಲಿನ ಜಿಲ್ಲಾಡಳಿತ ತಿಳಿಸಿದೆ.