ಕರೊನಾ ಸೋಂಕಿಗೆ ಈವರೆಗೆ ಯಾವುದೇ ನಿರ್ದಿಷ್ಟ ಔಷಧ ಇಲ್ಲ. ಆದರೆ, ಮಲೇರಿಯಾಗೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಸದ್ಯದ ಮಟ್ಟಿಗೆ ರಾಮಬಾಣದಂತೆ ಕೆಲಸ ಮಾಡುತ್ತಿದೆ ಎಂದು ವಿಶ್ವದ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಔಷಧ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸಿದವರು ಭಾರತದ ರಸಾಯನ ಶಾಸ್ತ್ರದ ಜನಕ ಎಂದೇ ಕರೆಯಲ್ಪಡುವ ಆಚಾರ್ಯ ಪ್ರಫುಲ್ಚಂದ್ರ ರಾಯ್. 1934ರಲ್ಲಿ ರಾಯ್ ಆರಂಭಿಸಿದ ಪಶ್ಚಿಮ ಬಂಗಾಳ ಕೆಮಿಕಲ್ಸ್ ಆಂಡ್ ಫಾರ್ವಸ್ಯುಟಿಕಲ್ಸ್ ಲಿಮಿಟೆಡ್ ಅತಿ ಹೆಚ್ಚು ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧ ಉತ್ಪಾದನೆ ಮಾಡುವ ಕಂಪನಿಯಾಗಿತ್ತು.
ಆಚಾರ್ಯ ಪ್ರಫುಲ್ಚಂದ್ರ ರಾಯ್ ಭಾರತೀಯ ಔಷಧ ಉದ್ಯಮದ ಪಿತಾಮಹ ಎಂದೂ ಪರಿಗಣಿಸಲಾಗಿದೆ. ರಾಯ್ 1861ರ ಆ.2 ರಂದು ಬಂಗಾಳದ ಖುಲ್ನಾ ಜಿಲ್ಲೆಯ ರುರುಲಿ ಕಟಿಪಾರದಲ್ಲಿ (ಇಂದಿನ ಬಾಂಗ್ಲಾದೇಶ) ಜನಿಸಿದರು. ರಸಾಯನಶಾಸ್ತ್ರದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಅವರು, ಎಡಿನ್ಬರೊ ವಿವಿಯಲ್ಲಿ ವ್ಯಾಸಂಗ ಮಾಡಿದವರು. 1888ರಲ್ಲಿ ಭಾರತಕ್ಕೆ ಮರಳಿ ಖ್ಯಾತ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರೊಂದಿಗೆ ತಮ್ಮ ಪ್ರಯೋಗಾಲಯದಲ್ಲಿ ಒಂದು ವರ್ಷ ಕೆಲಸ ನಿರ್ವಹಿಸಿದರು. 1894 ರಲ್ಲಿ ಪ್ರಫುಲ್ಚಂದ್ರ ಪಾದರಸವನ್ನು ಮೊದಲ ಆವಿಷ್ಕಾರ ಮಾಡಿ ಮರ್ಕ್ಯುರಸ್ ನೈಟ್ರೇಟ್ನ್ನು ತಯಾರಿಸಿದರು, ಇದರ ಸಹಾಯದಿಂದ 80 ಹೊಸ ಸಂಯುಕ್ತಗಳನ್ನು ತಯಾರಿಸಲಾಯಿತು.
ತಪ್ಪು ತಿದ್ದಿಕೊಂಡ ಡಬ್ಲು್ಯಎಚ್ಒ
ಭಾರತದಲ್ಲಿ ಕರೊನಾ ಸೋಂಕು ಸಮುದಾಯ ಪ್ರಸರಣ ಹಂತದಲ್ಲಿದೆ ಎಂದು ವರದಿ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್ಒ) ತನ್ನ ತಪು್ಪ ತಿದ್ದಿಕೊಂಡಿದ್ದಾಗಿ ಹೇಳಿದೆ. ವಿಶ್ವದ ಕರೊನಾ ಪೀಡಿತ ರಾಷ್ಟ್ರಗಳ ಪಟ್ಟಿ ತಯಾರಿಸಿದ್ದ ಡಬ್ಲು್ಯಎಚ್ಒ ಸಮುದಾಯ ಪ್ರಸರಣ ವಿಭಾಗದಲ್ಲಿ ಭಾರತದ ಹೆಸರನ್ನು ಉಲ್ಲೇಖಿಸಿತ್ತು. ಈ ದೋಷವನ್ನು ಸರಿಪಡಿಸಲಾಗಿದ್ದು, ಭಾರತದಲ್ಲಿ ಕರೊನಾ ಇನ್ನು ಸಮುದಾಯ ಪ್ರಸರಣ ಹಂತದಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದೆ.