ನ್ಯೂಸ್

ರಾಜ್ಯದಲ್ಲಿ ಕೊವಿಡ್​-19ರಿಂದ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆ; 2481 ಸೋಂಕಿತರು

ಬೆಂಗಳೂರು: ರಾಜ್ಯದಲ್ಲಿ ಇಂದು ಸಂಜೆ ಕೊವಿಡ್​-19 ಸೋಂಕಿತರ ಸಂಖ್ಯೆ 2418ಕ್ಕೆ ಏರಿದೆ. ಕಳೆದ 24ಗಂಟೆಯಲ್ಲಿ (ನಿನ್ನೆ ಸಂಜೆ 5ರಿಂದ ಇಂದು ಸಂಜೆ 5) ಒಟ್ಟು 135 ಹೊಸ ಪ್ರಕರಣಗಳು ಪತ್ತೆಯಾಗಿವೆ.

ನಿನ್ನೆ ಸಂಜೆ 5ಗಂಟೆಯಿಂದ ಇಂದು ಮಧ್ಯಾಹ್ನದವವರೆಗೆ 122 ಪ್ರಕರಣಗಳು ಪತ್ತೆಯಾಗಿದ್ದವು. ಸಂಜೆಯ ಹೊತ್ತಿಗೆ ಮತ್ತೆ 13 ಮಂದಿಯಲ್ಲಿ ಕೊವಿಡ್​-19 ದೃಢಪಟ್ಟಿದೆ.

ಕರೊನಾದಿಂದ ಇಂದು ಮೃತಪಟ್ಟವರು ಮೂರು ಮಂದಿಯಾಗಿದ್ದು ಒಟ್ಟು ಸಾವಿನ ಸಂಖ್ಯೆ 47ಕ್ಕೆ ಏರಿದೆ. ಇದುವರೆಗೆ ಆಸ್ಪತ್ರೆಯಿಂದ 781 ಮಂದಿ ಡಿಸ್​ಚಾರ್ಜ್​ ಆಗಿದ್ದಾರೆ. ಕಳೆದ 24ಗಂಟೆಯಲ್ಲಿ ಪತ್ತೆಯಾದ 135 ಕೊವಿಡ್​-19 ಪ್ರಕರಣಗಳಲ್ಲಿ 116 ಮಂದಿ ಅಂತರಾಜ್ಯ ಪ್ರಯಾಣಿಕರೇ ಆಗಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು..ಇಲ್ಲಿದೆ ಮಾಹಿತಿ
  • ಬೆಂಗಳೂರು ನಗರ-6
  • ಮಂಡ್ಯ-1
  • ಕಲಬುರಗಿ-28
  • ಯಾದಗಿರಿ-16
  • ಬೆಳಗಾವಿ-4
  • ದಾವಣಗೆರೆ-6
  • ಹಾಸನ-15
  • ಚಿಕ್ಕಬಳ್ಳಾಪುರ-4
  • ಬೀದರ್​-13
  • ಉಡುಪಿ-9
  • ವಿಜಯಪುರ-3
  • ಉತ್ತರಕನ್ನಡ-6
  • ದಕ್ಷಿಣ ಕನ್ನಡ-11
  • ರಾಯಚೂರು-5
  • ಬಳ್ಳಾರಿ-1
  • ಕೋಲಾರ-1
  • ತುಮಕೂರು-1
  • ಬೆಂಗಳೂರು ಗ್ರಾಮೀಣ-2
  • ಚಿಕ್ಕಮಗಳೂರು-3