ಲಂಡನ್: ಎಲ್ಲರಿಗೂ ತಿಳಿದಿರುವಂತೆ ಕರೊನಾ ವೈರಾಣು ಕೇವಲ ಶ್ವಾಸಕೋಶ ಅಲ್ಲ, ಕರುಳಿನಲ್ಲೂ ವೃದ್ಧಿಸಿ, ಅತಿಸಾರ, ಕಾಲಾರಾದಂಥ ಸಮಸ್ಯೆ ಉಂಟು ಮಾಡಬಲ್ಲದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಜರ್ನಲ್ ಸೈನ್ಸ್ನಲ್ಲಿ ಪ್ರಕಟವಾಗಿರುವ ಮಹಾಪ್ರಬಂಧದಲ್ಲಿ ಕರುಳುಗಳು ಕೂಡ ಸಾರ್ಸ್-ಕೋವಿಡ್-2 ವೈರಾಣುಗಳ ದಾಳಿಗೆ ಒಳಗಾಗಬಲ್ಲದು ಎಂದು ವಿವರಿಸಲಾಗಿದೆ.
ಅಧ್ಯಯನ ವರದಿಯ ಪ್ರಕಾರ ಕೋವಿಡ್ 19 ವೈರಾಣು ಶ್ವಾಸಕೋಶವನ್ನು ಹೊಕ್ಕಿ ಅಲ್ಲಿರುವ ACE2 ಎಂಬ ಕಿಣ್ವದ ಮೇಲೆ ದಾಳಿ ಇಡುತ್ತದೆ. ತನ್ಮೂಲಕ ಅದಲ್ಲಿ ಅದು ವೃದ್ಧಿ ಹೊಂದಿ ದೇಹದ ಇತರ ಭಾಗಗಳಿಗೂ ಹರಡಿಕೊಳ್ಳುತ್ತದೆ ಎಂದು ನೆದರ್ಲೆಂಡ್ನ ಎರಸಮಸ್ ಮೆಡಿಕಲ್ ಸೆಂಟರ್ನ ತಜ್ಞರು ವಿವರಿಸಿದ್ದಾರೆ.
ಇದರಿಂದಾಗಿ ಶ್ವಾಸಕೋಶಕ್ಕೆ ಗರಿಷ್ಠ ಪ್ರಮಾಣದ ಹಾನಿಯುಂಟಾಗಿ ಕೆಮ್ಮು, ಉಸಿರಾಟದ ತೊಂದರೆಯಿಂದ ನ್ಯುಮೋನಿಯಾವರೆಗೆ ಸಮಸ್ಯೆನ್ನುಂಟು ಮಾಡುತ್ತದೆ. ಸಣ್ಣ ಕರುಳಿನಲ್ಲಿ ಇರುವ ಎಪಿಥ್ಯಾಲಿಯಲ್ ಕೋಶಗಳಲ್ಲಿ ಕೂಡ ACE2 ಕಿಣ್ವಗಳಿವೆ. ಕೋವಿಡ್ 19 ವೈರಾಣು ಶ್ವಾಸಕೋಶದಂತೆ ಸಣ್ಣಕರುಳಿನ ಎಪಿಥ್ಯಾಲಿಯಲ್ ಕೋಶಗಳಲ್ಲಿನ ಆ ಕಿಣ್ವಗಳ ಮೇಲೆ ದಾಳಿ ಮಾಡುವುದರಿಂದ ಅತಿಸಾರದಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವಿವರಿಸಿದ್ದಾರೆ.