ನ್ಯೂಸ್

ಅಪ್ರಾಪ್ತ ವಯಸ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕನಿಗೆ 111 ವರ್ಷ ಕಠಿಣ ಶಿಕ್ಷೆ ವಿಧಿಸಿದ Court

ಕೇರಳ: ಐದು ವರ್ಷಗಳ ಹಿಂದೆ 11 ವರ್ಷದ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಆರೋಪಿ ಟ್ಯೂಷನ್​ ಶಿಕ್ಷಕರಾಗಿದ್ದ ಮನೋಜ್​ ಎಂಬುವವರಿಗೆ ತಿರುವನಂತಪುರಂ ನ್ಯಾಯಾಲಯ 111 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.05 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.

11 ವರ್ಷದ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿರುವ ಮನೋಜ್​ ಯಾವುದೇ ಕರಣೆ ಇಲ್ಲದೇ ಕೃತ್ಯ ಎಸಗಿದ್ದಾನೆ. ಅಲ್ಲದೆ, ನಿಯಮದೊಳಗೆ ದಂಡ ಪಾವತಿಸಲು ವಿಫಲನಾದರೆ ಮತ್ತೊಂದು ವರ್ಷದ ಶಿಕ್ಷೆ ವಿಸ್ತರಿಸಲಾಗಿದೆ ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಧೀಶೆ ಆರ್.ರೇಖಾ ನೇತೃತ್ವದ ಪೀಠ ಹೇಳಿದೆ. ವರದಿಯ ಪ್ರಕಾರ, ಬಾಲಕಿ ಪ್ರಕರಣ ತಿಳಿದ ಬಳಿಕ ಮನೋಜ್​ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ..

ಆರೋಪಿ ಸರ್ಕಾರಿ ನೌಕರನಾಗಿದ್ದು, ತನ್ನ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದ. ಜುಲೈ 2, 2019 ರಂದು ಆರೋಪಿಯು ವಿಶೇಷ ತರಗತಿಯ ನೆಪದಲ್ಲಿ ಬಾಲಕಿಯನ್ನು ತನ್ನ ನಿವಾಸಕ್ಕೆ ಕರೆಸಿಕೊಂಡ ನಂತರ ಈ ಘಟನೆ ಸಂಭವಿಸಿದೆ.

ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಯು ಕೇವಲ ಲೈಂಗಿಕ ಕಿರುಕುಳ ನೀಡಲಿಲ್ಲ, ತನ್ನ ಮೊಬೈಲ್ ಫೋನ್‌ನಲ್ಲಿ ನಿಂದನೆಯ ಫೋಟೋಗಳನ್ನು ಸಹ ತೆಗೆದುಕೊಂಡನು. ಘಟನೆಯ ನಂತರ ಹುಡುಗಿ ಆಘಾತಕ್ಕೊಳಗಾಗಿದ್ದಾಳೆ ಮತ್ತು ಭಯಗೊಂಡು ಹಿಂದೆ ಸರಿದಿದ್ದಾಳೆ. ಬಳಿಕ ಆಕೆ ಟ್ಯೂಷನ್ ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದಾಳೆ. ಬಾಲಕಿಯ ಇಮೇಜ್‌ಗೆ ಧಕ್ಕೆ ತರುವಂತಹ ಚಿತ್ರಗಳನ್ನು ಆರೋಪಿ ಪ್ರಸಾರ ಮಾಡುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾನೆ.

ಬಳಿಕ ಮನೋಜ್‌ನನ್ನು ಬಂಧಿಸಿ ಆತನ ಫೋನ್ ಅನ್ನು ವಶಪಡಿಸಿಕೊಂಡು ಮತ್ತು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ ಬಾಲಕಿಯ ದೌರ್ಜನ್ಯದ ಫೋಟೋಗಳಿವೆ ಎಂದು ಧೃಢಪಟ್ಟಿದೆ.(ಏಜೆನ್ಸೀಸ್​)