ಬಾಲಿವುಡ್ ನಟಿ ನೋರಾ ಫತೇಹಿ 
ನ್ಯೂಸ್

ನೋರಾ ಫತೇಹಿಗೆ ಕೋರ್ಟ್ ತರಾಟೆ: ‘ನ್ಯಾಯಾಲಯವನ್ನು ಹಗುರವಾಗಿ ಪರಿಗಣಿಸಬೇಡಿ!’ | Nora Fatehi Summons

ನೋರಾ ಫತೇಹಿಗೆ ನವೆಂಬರ್ 6 ರಂದು ಕೋರ್ಟ್‌ಗೆ ಹಾಜರಾಗಲು ಹೊಸ ಸಮನ್ಸ್

ನಟಿಗೆ ‘ಕೋರ್ಟ್ ಅನ್ನು ಹಗುರವಾಗಿ ಪರಿಗಣಿಸಬೇಡಿ’ ಎಂದ ನ್ಯಾಯಾಲಯ

200 ಕೋಟಿ ರೂ. ಸುಲಿಗೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ನೋರಾ ಫತೇಹಿ

Sukesh Chandrashekhar case: ಕಾನ್‌ಮ್ಯಾನ್ ಸುಕೇಶ್ ಚಂದ್ರಶೇಖರ್‌ 200 ಕೋಟಿ ರೂ. ಬೃಹತ್ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿಗೆ ದೆಹಲಿ ರೌಸ್ ಅವೆನ್ಯೂ ಕೋರ್ಟ್ ಹೊಸ ಸಮನ್ಸ್ ನೀಡಿದೆ. ಪ್ರಮುಖ ಸಾಕ್ಷಿಯಾಗಿರುವ ಅವರು ನವೆಂಬರ್ 6 ರಂದು ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಧೀಶ ಗಗನ್‌ದೀಪ್ ಸಿಂಗ್ ಸೂಚಿಸಿದ್ದಾರೆ.

ವಿಚಾರಣೆ ವೇಳೆ, ನೋರಾ ಫತೇಹಿಗೆ ಸಮನ್ಸ್ ತಲುಪಿದ್ದರೂ ಅವರು ಹಾಜರಾಗುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ದೆಹಲಿ ಪೊಲೀಸರು ಕೋರ್ಟ್‌ಗೆ ತಿಳಿಸಿದರು. ಇದೇ ವೇಳೆ ನೋರಾ ಪರ ವಕೀಲರು ಹಾಜರಾಗಿ, ಇಂದಿನ ವಿಚಾರಣೆಗೆ ವಿನಾಯಿತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು.

ನ್ಯಾಯಾಲಯವನ್ನು ಕಡೆಗಣಿಸಬೇಡಿ

ಇದರಿಂದ ಕೋಪಗೊಂಡ ಕೋರ್ಟ್​. ‘ಸಾಕ್ಷಿಯಾಗಿರುವ ನೋರಾ ಫತೇಹಿ ಕೋರ್ಟ್‌ಗೆ ಬರಲೇಬೇಕಿತ್ತು. ಅವರ ಈ ನಡವಳಿಕೆ ಸರಿಯಲ್ಲ, ನ್ಯಾಯಾಲಯವನ್ನು ಕಡೆಗಣಿಸಬೇಡಿ’ ಎಂದು ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ಅಕ್ಟೋಬರ್ 29 ರಂದೇ ಮಾಹಿತಿ ನೀಡಿದ್ದಾಗಿ ವಕೀಲರು ತಿಳಿಸಿದಾಗ, ಕೋರ್ಟ್ ನವೆಂಬರ್ 6 ರಂದು ಹಾಜರಾಗುವಂತೆ ಹೊಸ ಸಮನ್ಸ್ ನೀಡಿತು.

ಏನಿದು 200 ಕೋಟಿ ರೂ. ಸುಲಿಗೆ ಪ್ರಕರಣ?

ದೆಹಲಿಯ ರೋಹಿಣಿ ಜೈಲಿನಲ್ಲಿದ್ದ ಸುಕೇಶ್ ಚಂದ್ರಶೇಖರ್, ಹಿರಿಯ ಸರ್ಕಾರಿ ಅಧಿಕಾರಿಯಂತೆ ನಟಿಸಿ ರಣಬಾಕ್ಸಿಯ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಗೆ ವಂಚಿಸಿದ್ದ. ಪತಿಯನ್ನು ಜೈಲಿನಿಂದ ಬಿಡಿಸುವುದಾಗಿ ನಂಬಿಸಿ 2020-21ರ ಅವಧಿಯಲ್ಲಿ ಸುಮಾರು 200 ಕೋಟಿ ರೂಪಾಯಿ ಸುಲಿಗೆ ಮಾಡಿದ್ದ ಎಂಬ ಆರೋಪವಿದೆ.

ಇದನ್ನೂ ಓದಿ: ಶಿವಸೇನಾ ನಾಯಕನ ಮನೆಯಲ್ಲೇ ಡ್ರಗ್ಸ್ ಇಟ್ಟ ಖಾಕಿ: ತಾನೇ ತೋಡಿದ ಹಳ್ಳಕ್ಕೆ ಬಿದ್ದ ಪೊಲೀಸ್! | Punjab Police Drugs

ಈ ಪ್ರಕರಣದಲ್ಲಿ ದೆಹಲಿ ಪೊಲೀಸ್ ಇಒಡಬ್ಲ್ಯೂ (EOW) ಮಕೋಡಾ ಕಾಯ್ದೆಯಡಿ ಚಾರ್ಜ್‌ಶೀಟ್ ದಾಖಲಿಸಿದೆ. ಸುಕೇಶ್ ಪತ್ನಿ ಲೀನಾ ಜತೆಗಿನ ಸಂಪರ್ಕ ಮತ್ತು ಚೆನ್ನೈ ಕಾರ್ಯಕ್ರಮದ ವಿಚಾರಣೆ ನಡೆಸಿದ ಪೊಲೀಸರು, ಸೆಕ್ಷನ್ 164 ರ ಅಡಿ ನೋರಾ ಹೇಳಿಕೆ ಪಡೆದು ಅವರನ್ನು ಪೂರಕ ಚಾರ್ಜ್‌ಶೀಟ್‌ನಲ್ಲಿ ಪ್ರಮುಖ ಸಾಕ್ಷಿಯನ್ನಾಗಿ ಮಾಡಿದ್ದಾರೆ. (ಏಜೆನ್ಸೀಸ್​)