ನ್ಯೂಸ್

ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ

ರಾಣೆಬೆನ್ನೂರ: ನೆಹರು ಯುವ ಕೇಂದ್ರ ಹಾಗೂ ನಗರದ ಆರ್​.ಟಿ.ಇ.ಎಸ್​. ಮಹಾವಿದ್ಯಾಲಯದ ಎನ್​.ಎಸ್​.ಎಸ್​.ಘಟಕದ ಸಹಯೋಗದಲ್ಲಿ ಸ್ವಚ್ಛತೆ ಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಇಲ್ಲಿಯ ನ್ಯಾಯಾಲಯದ ಸುತ್ತ-ಮುತ್ತಲಿನ ಆವರಣ ಸ್ವಚ್ಛಗೊಳಿಸಲಾಯಿತು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎನ್​ಎಸ್​ಎಸ್​ ಸಂಯೋಜಕ ಡಾ. ಸರಸ್ವತಿ ಬಮ್ಮನಾಳ, ಹೇಮಗಿರಿ ಅಂಗಡಿ ಹಾಗೂ ಕಾಲೇಜ್​ನ ವಿದ್ಯಾಥಿರ್ಗಳು ಮತ್ತಿತರರು ಪಾಲ್ಗೊಂಡಿದ್ದರು.