ಹೈದರಾಬಾದ್: ನವೆಂಬರ್ 01ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಉದ್ಯಮಿ ಮತ್ತು ಸ್ಟ್ಯಾಂಡಪ್ ಕಾಮಿಡಿಯನ್(Standup Comedian) ಆಗಿರುವ ಉತ್ಸವ್ ದಿಕ್ಷೀತ್ಗೆ ನೋಟಿಸ್ ಜಾರಿ ಮಾಡುವಂತೆ ಬಂಜಾರ ಹಿಲ್ಸ್ ಪೊಲೀಸರಿಗೆ ಇಲ್ಲಿನ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ನವೆಂಬರ್ 01 ರಂದು ದೀಕ್ಷಿತ್ ತನ್ನ ಪೋರ್ಷೆ ಟಾಯ್ಕಾನ್ (Porsche Taycan) ಕಾರನ್ನು ಅತಿವೇಗವಾಗಿ ಚಲಾಯಿಸಿ ಸಾರ್ವಜನಿಕ ಆಸ್ತಿಯನ್ನು ನಷ್ಟ ಮಾಡಿದ್ದನ್ನು. ಘಟನೆ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಇದನ್ನೂ ಓದಿ; Waqf Controversy| ನೋಟಿಸ್ ಕೊಟ್ಟು ಅನ್ನದಾತರ ಮೇಲೆ ಕಲ್ಲು ಎಳೆದ ಸರ್ಕಾರ: ವಿಪಕ್ಷ ನಾಯಕ R Ashok ಕಿಡಿ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ಆರೋಪಿಗೆ BNS ಸೆಕ್ಷನ್ 35ರ ಅಡಿಯಲ್ಲಿ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದಾರೆ. ಘಟನೆ ಸಂಬಂಧ ಈತನ ವಿಚಾರಣೆ ಅಗತ್ಯವಿದ್ದು, ಈತನ ಹೇಳಿಕೆಯನ್ನು ದಾಖಲಿಸಿಕೊಂಡು ನ್ಯಾಯಾಲಯಲ್ಲೆ ಸಲ್ಲಿಸಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ.
ಉದ್ಯಮಿಯಾಗಿರುವ ದೀಕ್ಷಿತ್ ಸ್ಟ್ಯಾಂಡಪ್ ಕಾಮಿಡಿಯನ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಸ್ನೇಹಿತರನ್ನು ಭೇಟಿ ಮಾಡಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಯ ಸಂಭವಿಸಿರಲಿಲ್ಲ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನೀಸ್)