ನ್ಯೂಸ್

ಅನುಮಾನಸ್ಪದ ರೀತಿಯಲ್ಲಿ ಓಡಿ ಹೋದ ದಂಪತಿ ಶವ ಪತ್ತೆ, ಆತ್ಮಹತ್ಯೆ ಶಂಕೆ| Couple Death

Couple Death: ಚಂಡೀಗಢದ ಹೋಟೆಲ್​ ಕೋಣೆಯೊಂದರಲ್ಲಿ ಉತ್ತರ ಪ್ರದೇಶದ ಮುಜಾಫರ್​ ನಗರದ 21 ವರ್ಷದ ಯುವಕ ಮತ್ತು ಆತನ 17 ವರ್ಷದ ಅಪ್ರಾಪ್ತ ಬಾಲಕಿ ಓಡಿಹೋಗಿ ಮದುವೆಯಾದ ಕೆಲವು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ (ಆಗಸ್ಟ್ 22) ತಿಳಿಸಿದ್ದಾರೆ.

ಕಾರ್ಖಾನೆಯ ಕೆಲಸಗಾರ ಅರ್ಷದ್ ಮತ್ತು 17 ವರ್ಷದ ಬಾಲಕಿ ಆಗಸ್ಟ್ 18ರಂದು ಬೇಗರಾಜ್‌ಪುರ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಓಡಿಹೋಗಿದ್ದರು. ಗುರುವಾರ ಅವರು ಮೃತಪಟ್ಟಿರುವುದು ಪತ್ತೆಯಾಗಿದ್ದು, ವಿಷ ಸೇವಿಸಿರಬಹುದು ಅಧಿಕಾರಿಗಳು ಶಂಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್, ಬಾಲಕಿಯ ಕುಟುಂಬವು ಎರಡು ದಿನಗಳ ಹಿಂದೆ ಅರ್ಷದ್ ವಿರುದ್ಧ ಅಪಹರಣ ದೂರು ದಾಖಲಿಸಿತ್ತು. ಚಂಡೀಗಢ ಹೋಟೆಲ್​ವೊಂದರಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಅಲ್ಲಿ ಒಂದು ಡೆತ್​ ನೋಟ್ ಸಿಕ್ಕಿದೆ. ಆ ಪತ್ರದಲ್ಲಿ ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿದ್ದಾರೆ ಎಂದು ಹೇಳಿದ್ದಾರೆ.

ಯುವಕ ಮತ್ತು ಬಾಲಕಿ ಕಾಣೆಯಾದಾಗ ಕೆಲವು ಹಿಂದೂ ಸಂಘಟನೆಗಳು ಅವರನ್ನು ಹುಡುಕುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಆಗಸ್ಟ್ 18ರಂದು ಬಾಲಕಿ ಕಾಲೇಜಿಗೆ ಹೋದವಳು ಹಿಂತಿರುಗಿರಲಿಲ್ಲ. ಗುರುವಾರ ರಾತ್ರಿ ಚಂಡೀಗಢ ಪೊಲೀಸರು ಮುಜಾಫರ್​ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದು ಬಂದಿದೆ. (ಏಜೆನ್ಸೀಸ್)