ನ್ಯೂಸ್

ವಿಡಿಯೋ: ನಡುರಸ್ತೆಯಲ್ಲೇ ಯುವಕ-ಯುವತಿ ಮಾಡಿದ ಈ ಕೆಲಸ ಈಗ ಭಾರೀ ವೈರಲ್!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ತೀವ್ರವಾಗಿ ವೈರಲ್ ಆಗುತ್ತಿದೆ, ಇದರಲ್ಲಿ ಹುಡುಗ ಮತ್ತು ಹುಡುಗಿ ನಡು ರಸ್ತೆಯಲ್ಲಿಯೇ ನೃತ್ಯ ಮಾಡುತ್ತಿದ್ದಾರೆ. ಈ ಇಬ್ಬರ ನೃತ್ಯವನ್ನು ಗಮನಿಸಿದರೆ, ಇವರು ತರಬೇತಿ ಪಡೆದಿದ್ದಾರೆಯೇ? ಎನ್ನುವಷ್ಟು ಪರ್ಫೆಕ್ಟ್ ಆಗಿದೆ.

ಪ್ರೇರಣಾ ಮಹೇಶ್ವರಿ ಎಂಬ ಬಳಕೆದಾರರು ಈ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ರಸ್ತೆಯ ಬೀದಿ ದೀಪಗಳ ಕೆಳಗೆ ಹುಡುಗ ಮತ್ತು ಹುಡುಗಿ ನೃತ್ಯ ಮಾಡುವುದನ್ನು ನೀವು ಕಾಣಬಹುದು. ಪ್ರಮುಖವಾಗಿ, ಅವರಿಬ್ಬರ ನಿರಾತಂಕದ ನೃತ್ಯ ಯಾರೋ ಶೂಟ್ ಮಾಡುತ್ತಿದ್ದಾರೆ ಎಂಬ ಕಲ್ಪನೆಯೂ ಅವರಿಗೆ ಗೊತ್ತಿಲ್ಲ ಎಂಬಂತೆ ತೋರುತ್ತದೆ.

ಇವರಿಬ್ಬರು ಯಾರು ಎಂಬುದರ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ ಇವರ ಡ್ಯಾನ್ಸ್ ನೋಡಿದ್ರೆ ಮಾತ್ರ, ಇವರು ತರಬೇತಿ ಪಡೆದ ಡ್ಯಾನ್ಸರ್ ಗಳಿಗಿಂತ ಕಮ್ಮಿಯೇನಿಲ್ಲ ಎಂಬುದನ್ನು ನೀವೂ ಕೂಡ ಹೇಳಬಹುದು. ಇಬ್ಬರ ಡ್ಯಾನ್ಸ್ ಮೂವ್ಮೆಂಟ್ಸ್ ಪರಿಪೂರ್ಣ ಸಿಂಕ್‌ನಲ್ಲಿವೆ ಮತ್ತು ಹಾಡಿನ ಟ್ಯೂನ್‌ಗೆ ನೃತ್ಯ ಮಾಡುವುದನ್ನು ಸಹ ಕಾಣಬಹುದು. ಸುಮಾರು 16 ಸೆಕೆಂಡ್ ಗಳ ಈ ವಿಡಿಯೋ 18 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಇದಲ್ಲದೆ, ವೀಡಿಯೊವನ್ನು 2500 ಕ್ಕೂ ಹೆಚ್ಚು ಬಾರಿ ರೀಟ್ವೀಟ್‌ ಮಾಡಲಾಗಿದೆ ಮತ್ತು ಇದುವರೆಗೆ ಅದು ಸುಮಾರು 3.5 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.